Saturday, May 18, 2024

ಬೀಡಿ-ಸಿಗರೇಟ್​ನಿಂದ ಆರತಿ, ಮದ್ಯದಿಂದಲೇ ಅಭಿಷೇಕ, ರಕ್ತದಿಂದ ನೈವೇದ್ಯ: ಇದು ಖಾಪ್ರಿ ಜಾತ್ರೆ ವಿಶೇಷ

ಕಾರವಾರ : ಬೀಡಿ-ಸಿಗರೇಟ್‌ನಿಂದ ಆರತಿ, ಮದ್ಯದಿಂದಲೇ ಅಭಿಷೇಕ, ರಕ್ತದಿಂದ ನೈವೇದ್ಯ. ಇದು ಖಾಪ್ರಿ ದೇವರ ಜಾತ್ರೆಯ ವಿಶೇಷ.

ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದಲ್ಲಿ ವರ್ಷಕ್ಕೊಮ್ಮೆನಡೆಯುವ ಖಾಪ್ರಿ ದೇವರ ಜಾತ್ರೆ ವಿಭಿನ್ನವಾಗಿದೆ. ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ, ಬೀಡಿ-ಸಿಗರೇಟ್‌ನಿಂದಲೇ ಆರತಿ ಬೆಳಗಲಾಗುತ್ತದೆ. ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.

ಹರಕೆ ಕಟ್ಟಿಕೊಂಡು ಬರುವ ಭಕ್ತರು ಸಿಗರೇಟ್​​, ಕ್ಯಾಂಡಲ್‌ನಿಂದ ಆರತಿ ಮಾಡಿ ಮದ್ಯದಿಂದಲೇ ಅಭಿಷೇಕವನ್ನೂ ಮಾಡುತ್ತಾರೆ. ಅಷ್ಟೇ ಅಲ್ಲ, ದೇವರಿಗೆ ಕೋಳಿ ಬಲಿ ಕೊಟ್ಟು ರಕ್ತದಿಂದ ನೈವೇದ್ಯ ಮಾಡುತ್ತಾರೆ. ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.

ಗೋವಾ, ಮಹಾರಾಷ್ಟ್ರದಿಂದ ಭಕ್ತರು

ಪ್ರತೀ ವರ್ಷ ಇದೇ ರೀತಿ ದೇವರಿಗೆ ಫಲ ಪುಷ್ಪ ಸಮರ್ಪಿಸುವ ಜತೆಗೆ ಸಾರಾಯಿ, ಸಿಗರೇಟ್ ಮತ್ತು ಕೋಳಿಯನ್ನೂ ಭಕ್ತರು ಅರ್ಪಿಸುತ್ತಾರೆ.ಸಾಮಾನ್ಯವಾಗಿ ದೇವರಿಗೆ ನೈವೇದ್ಯವಾಗಿ ತಿಂಡಿ-ತಿನಿಸು ಹಾಗೂ ಹಣ್ಣು, ಹಂಪಲುಗಳನ್ನು ಸಮರ್ಪಿಸುತ್ತಾರೆ. ಈ ಜಾತ್ರೆಗೆ ಕಾರವಾರದಿಂದ ಅಷ್ಟೆ ಅಲ್ಲದೆ ಪಕ್ಕದ ಗೋವಾ ಹಾಗೂ ಮಹಾರಾಷ್ಟ್ರದಿಂದಲ್ಲೂ ನೂರಾರು ಭಕ್ತರು ಆಗಮಿಸಿ ತಮ್ಮ ಹರಕೆ ಸಲ್ಲಿಸುತ್ತಾರೆ.

RELATED ARTICLES

Related Articles

TRENDING ARTICLES