Friday, May 3, 2024

Loksabha Election 2024: ಏಪ್ರಿಲ್​ 26, ಮೇ.7ರಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ: ಜೂನ್​ 04ರಂದು ಫಲಿತಾಂಶ

ಬೆಂಗಳೂರು: ಯಾವಾಗ ಚುನಾವಣೆ ಎಂದು ಜನ ಕಾಯುತ್ತಿದ್ದರು. ಜನರ ನಿರೀಕ್ಷೆಗೆ ಉತ್ತರಿಸಿರುವ ಚುನಾವಣಾ ಆಯೋಗ ಕೊನೆಗೆ ಒಂದು ದಿನವನ್ನು ತಿಳಿಸಿದೆ.2024ರ ಲೋಕಸಭೆ ಚುನಾವಣೆ ಏಪ್ರಿಲ್​ 26, ಮೇ.7ರಂದು ಕರ್ನಾಟಕದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯು ಏಪ್ರಿಲ್ 19ರಿಂದ ದೇಶದಲ್ಲಿ 7 ಹಂತಗಳಲ್ಲಿ ನಡೆಯಲಿದೆ.ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಫಲಿತಾಂಶ ಜೂನ್​ 04 ರಂದು ಪ್ರಕಟವಾಗಲಿದೆ.ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್​ 04 ಎಂದು ಚನುವಣೆ ಆಯೋಗ ಘೋಷಣೆ ಮಾಡಿದೆ.

ಈ ಬಾರಿ 97 ಕೋಟಿಗೂ ಹೆಚ್ಚು ನೊಂದಾಯಿತ ಮತದಾರು ಇದ್ದಾರೆ.ದೇಶದಲ್ಲಿ 49.72 ಕೋಟಿ ಪುರುಷ ಮತದಾರರು ಹಾಗೂ ಮಹಿಳಾ ಮತದಾರರು 47.15 ಕೋಟಿ 80 ವರ್ಷ ದಾಟಿದ ಮತದಾರರ ಸಂಖ್ಯೆ 1.90 ಕೋಟಿ ಮತದಾರರು ಇದ್ದಾರೆ ಎಂದು ಹೇಳಿದರು.

ದೇಶದಲ್ಲಿ10 ಲಕ್ಷದ 500 ಸಾವಿರ ಮತಗಟ್ಟೆಗಳು ಇದ್ದು, ಮೊದಲ ಬಾರಿಗೆ ಮತದಾನ ಮಾಡುವವರು ಸಂಖ್ಯೆ 1.8 ಕೋಟಿ ಇದೆ.

ಲೋಕಸಭೆ ಚುನಾವಣೆ ನಡೆಸಲು ಆಯೋಗ ಈಗಗಲೇ ಸರ್ವಸನ್ನದ್ಧವಾಗಿದೆ ಎಂದು ಘೋಷಿಸಿದ ಮುಖ್ಯ ಚುನಾವಣಾ ಆಯುಕ್ತ. 543 ಲೋಕಸಭಾ ಕ್ಷೇತ್ರಗಳಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ತಯಾರಿಯಾಗಿದೆ ಎಂದ ರಾಜೀವ್ ಕುಮಾರ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

7 ಹಂತದಲ್ಲಿ ಮತದಾನ ನಡೆಯಲಿದೆ.

ಚುನಾವಣಾ ಆಯೋಗದ ನೂತನ ಸದಸ್ಯರಾದ ಜ್ಞಾನೇಶ್ ಕುಮಾರ್ ಹಾಗೂ ಸುಖಬೀರ್ ಸಿಂಗ್ ಇದ್ದಾರೆ.

 

 

RELATED ARTICLES

Related Articles

TRENDING ARTICLES