Saturday, May 18, 2024

ಎಲೆಕ್ಷನ್​ಗೆ ಪಾಕ್​ನಿಂದ ಕಾಂಗ್ರೆಸ್ಸಿಗೆ ಹಣ ಬಂದಿರಬೇಕು: ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಪಾಕ್​ನಿಂದ ಕಾಂಗ್ರೆಸ್ಸಿಗೆ ಚುನಾವಣೆಗಾಗಿ ಹಣ ಬಂದಿರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ದುಡ್ಡು ಕಾಂಗ್ರೆಸ್ ಬಂದಿರಬೇಕು,ಅದು ಬಿಜೆಪಿಗೆ ಬಂದಿಲ್ಲ ಈಗಾಗಲೇ ಚುನಾವಣೆ ದಿನಾಂಕ ನಿಗದಿಯಾಗಿದೆ.ಕ್ಯಾಲೆಂಡರ್ ಆಫ್ ದಿ‌ ಇವೆಂಟ್ ಕೂಡ ಬಂದಿದೆ.ಈ ನಿಟ್ಟಿನಲ್ಲಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ.ಎರಡು ಅವಧಿಯ ಮೋದಿ ನೇತೃತ್ವದ ಸರ್ಕಾರದ ನಿಯತ್ತನ್ನು ನೋಡಿ ಈ ಬಾರಿಯೂ ಜನರು ಆಶೀರ್ವಾದ ಮಾಡುತ್ತಾರೆ ಎಂದರು.

ಈ ಬಾರಿ ಬಹುದೊಡ್ಡ ಗೆಲುವಿನೊಂದಿಗೆ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸರ್ಕಾರದ ನಿಯತ್ತನ್ನು ಜನರು ನೋಡಿದ್ದಾರೆ.ಅವರೇ ಈ ಚುನಾವಣೆ ಮೂಲಕ ಉತ್ತರ ಕೊಡುತ್ತಾರೆ ಎಂದರು.ಮೋದಿಯವರ ವಿರುದ್ಧ ಸುಳ್ಳು ಸುಳ್ಳು ಮಾತನಾಡಿ ಆರೋಪ ಮಾಡಿದ್ದವರಿಗೆ ಈ ಬಾರಿ ಚುನಾವಣೆ ತಕ್ಕ ಉತ್ತರ ಕೊಡಲಿದೆ ಎಂದರು.

ಪಾಕಿಸ್ತಾನದಿಂದ ಬಿಜೆಪಿಗೆ ಹಣ ಬಂದಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ಹಣ ಬಂದಿದೆ.ಬಿಜೆಪಿಗೆ ಇಂತಹ ಹಣದ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದ್ದರು.

RELATED ARTICLES

Related Articles

TRENDING ARTICLES