Friday, May 3, 2024

ಮಾಧುಸ್ವಾಮಿಯನ್ನ ನಾಯಿಗೆ ಹೋಲಿಸಿದ ಸಂಸದ ಜಿ.ಎಸ್. ಬಸವರಾಜ್

ತುಮಕೂರು : ಬಸವರಾಜ್ ಅವರು ಸಚಿವ ಕೆ.ಎನ್. ರಾಜಣ್ಣ ಪರ ಕೆಲಸ ಮಾಡುತ್ತಿದ್ದಾರೆ ಎಂದಿರುವ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿಗೆ ಸಂಸದ ಜಿ.ಎಸ್. ಬಸವರಾಜ್ ತಿರುಗೇಟು ನೀಡಿದ್ದಾರೆ. ಮಾಧುಸ್ವಾಮಿಯವರನ್ನ ನಾಯಿಗೆ ಹೋಲಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಿ ಬೋಗಳಿದಾಗೆ ಎತ್ತೆತ್ತೋ ಬೈಯೋದು, ಬಾಯಿಗೆ ಬಂದಾಗೆ ಬೈಯೋದು ಅಲ್ಲ. ಅವರ ಸಂಸ್ಕೃತಿ ಅದು ನಾನು ಏನು ಮಾಡೋಕೆ ಆಗುತ್ತೆ ಎಂದು ಪರೋಕ್ಷವಾಗಿ ನಾಯಿಗೆ ಹೋಲಿಕೆ ಮಾಡಿದ್ದಾರೆ.

ತುಮಕೂರು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣರನ್ನ ಸೋಲಿಸುವ ದುಷ್ಟ ಬುದ್ದಿ ನನಗೆ ಇಲ್ಲ. ಸೋಮಣ್ಣ ಸೋಲುವ ಅಭ್ಯರ್ಥಿನೇ ಅಲ್ಲ. ಮೈಸೂರಿನಲ್ಲಿ ಅಚಾನಕ್ ಆಗಿ ಸೋತಿದ್ದಾರೆ. ಈ ಬಾರಿ ಕಾದು ನೋಡಿ ಎಂದು ಹೇಳಿದ್ದಾರೆ.

ಸೋಮಣ್ಣರಿಗೆ ಬೆಂಬಲ ಇಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರವರ ವೈಯಕ್ತಿಕ ಇಚ್ಛೆ. ನಾವೆಲ್ಲಾ ಪ್ರಧಾನಿ ಮೋದಿಗಾಗಿ ಕೆಲಸ ಮಾಡ್ತಾ ಇರೋದು, ಸೋಮಣ್ಣಗೆ ಅಲ್ಲ. ಇಡೀ ರಾಷ್ಟ್ರನೇ ಮೋದಿಗೆ ಕೆಲಸ ಮಾಡ್ತಾ ಇದ್ದಾರೆ. ಆ ಬಗ್ಗೆ ಕಾಮೆಂಟ್ ಕೊಡಲ್ಲ ಎಂದು ಕುಟುಕಿದ್ದಾರೆ.

2 ತಿಂಗಳು ಮುಗಿದ್ರೆ ನಾನು ಎಂಪಿನೂ ಅಲ್ಲ

ಬಸವರಾಜ್ ಬಂದರೆ ಪರಿಣಾಮ ನೆಟ್ಟಿಗೆ ಇರಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ, ಅವರನ್ನ ನಾನು ನೋಡೊಕೆ ಹೋಗಲ್ಲವಲ್ಲ. ನಾನು ಅಭ್ಯರ್ಥಿನೇ ಅಲ್ವಲ್ಲ ರೀ.. ನಾನು ಆರ್ಡಿನರಿ ಮ್ಯಾನ್. ಇನ್ನೂ ಎರಡು ತಿಂಗಳು ಮುಗಿದ್ರೆ ನಾನು ಎಂಪಿನೂ ಅಲ್ಲ ಎಂದು ಚಾಟಿ ಬೀಸಿದರು.

ಪ್ರೀತಿ ವಿಶ್ವಾಸದಿಂದ ಹೋರಾಟ ಮಾಡಬೇಕು

ನಾಗರಿಕರಾಗಿ ದೇಶದಲ್ಲಿ ಪ್ರತಿಯೊಬ್ಬರು ಸ್ನೇಹಿತರಾಗಿರುತ್ತಾರೆ. ಉತ್ತಮರಾಗಿ ನಡೆ-ನುಡಿ ಚೆನ್ನಾಗಿ ಇರೋರ ಹತ್ತಿರ ನಾನು ಚೆನ್ನಾಗಿ ಇರುತ್ತೇನೆ. ಅವರು ಚೆನ್ನಾಗಿ ಇರುತ್ತಾರೆ. ನಡೆ-ನುಡಿ ಚೆನ್ನಾಗಿ ಇಲ್ಲದ ಕಡೆ ನಾನು ಚೆನ್ನಾಗಿ ಇರಲ್ಲ, ಅವರು ಚೆನ್ನಾಗಿ ಇರಲ್ಲ. ಪ್ರಜಾಪ್ರಭುತ್ವ ದ್ವೇಷದ ರಾಜಕಾರಣ ಅಲ್ಲ ಇದು. ಪ್ರೀತಿ ವಿಶ್ವಾಸದಿಂದ ಹೋರಾಟ ಮಾಡಬೇಕು ಎಂದು ಸಂಸದ ಬಸವರಾಜ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES