Tuesday, July 9, 2024

ದಿನ ಭವಿಷ್ಯ: ಇಂದು ಗಜಕೇಸರಿ ಯೋಗ, ಈ ರಾಶಿಗಿಂದು ಬಂಪರ್ ಧನಲಾಭ!

2024 ಮಾರ್ಚ್ 13ರ ಬುಧವಾರವಾದ ಇಂದು, ಚಂದ್ರನು ಮೇಷ ರಾಶಿಗೆ ಸಾಗಿದ್ದಾನೆ, ಅಲ್ಲಿ ಗುರು ಈಗಾಗಲೇ ಇರುವ ಕಾರಣ ಗಜಕೇಸರಿ ಯೋಗವು ರೂಪುಗೊಳ್ಳುತ್ತಿದೆ. ಈ ದಿನ ಗಜಕೇಸರಿ ಯೋಗದೊಂದಿಗೆ ಐಂದ್ರ ಯೋಗ, ರವಿಯೋಗ, ಅಶ್ವಿನಿ ನಕ್ಷತ್ರಗಳ ಶುಭ ಸಂಯೋಗ ನಡೆಯುತ್ತಿದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ: ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಇಂದು ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಥಿಕವಾಗಿ ಸದೃಢ ಇರಲಿದೆ. ಆರೋಗ್ಯ ಪರಿಪೂರ್ಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.

ವೃಷಭ: ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷ ಮತ್ತು ಆನಂದ ತೆರೆದಿಡುತ್ತದೆ. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಬಗ್ಗೆ ಅನುಭವಿ ಜನರೊಂದಿಗೆ ಮಾತನಾಡಬೇಕು. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಸಭಲತೆ ಇರಲಿದೆ.

ಮಿಥುನ: ನಿಮ್ಮ ಸಭ್ಯ ನಡವಳಿಕೆಯು ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಲು ಬಯಸುತ್ತಿದ್ದರೆ ಆರ್ಥಿಕ ಬಿಕ್ಕಟ್ಟು ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ.

ಕಟಕ: ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತವಾಗಿರಲಿದೆ. ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು ತೊಂದರೆಗೆ ಕಾರಣವಾಗುತ್ತದೆ. ಆರೋಗ್ಯ ಪರಿಪೂರ್ಣವಾಗಿ ಇದ್ದರು, ದೈಹಿಕ ಶ್ರಮ ಹೆಚ್ಚಲಿದೆ.

ಇದನ್ನೂ ಓದಿ: ಬಾಲ್ಯವಿವಾಹಕ್ಕೆ ನಿರಾಕರಣೆ; ಪತ್ನಿ ಕಾಲು ಮುರಿದ ಪತಿ

ಸಿಂಹ: ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದುವ ಸಾಧ್ಯತೆ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಮಕ್ಕಳಿಂದ ಅನಿರೀಕ್ಷಿತ ಸುದ್ದಿ ಸಂತೋಷದ ಕ್ಷಣಗಳನ್ನು ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ.

ಕನ್ಯಾ: ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಅತಿಥಿಗಳ ಆಗಮನವಾಗಲಿದೆ. ಸಕರಾತ್ಮಕ ಆಲೋಚನೆಗಳು ನಿಮ್ಮ ಉತ್ಸಾಹ ಇಮ್ಮಡಿಗೊಳಿಸಿಲಿದೆ. ಆರೋಗ್ಯ ಪರಿಪೂರ್ಣ ಇರಲಿದೆ.

ವೃಶ್ಚಿಕ: ಇಂದು ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ನಿಮ್ಮ ಭವಿಷ್ಯವನ್ನು ಯೋಜಿಸಲು ಸೂಕ್ತ ದಿನವಿದು. ಆರೋಗ್ಯದ ಕುರಿತು ಕಾಳಜಿ ವಹಿಸಿ.

ಧನಸ್ಸು: ನಿಮ್ಮ ಆರೋಗ್ಯ ಇಂದು ಕೈಕೊಡಲಿದೆ. ನೀವು ನಿಮ್ಮ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ.

ಮಕರ: ಸ್ನೇಹಿತರೊಂದಿಗೆ ವಿರಾಮ ಭೋಜನವಿದು. ಇದು ಒತ್ತಡದಿಂದ ಕೂಡಿದ್ದರೂ ಹೆಚ್ಚು ಲಾಭದಾಯಕವಾಗಿರುತ್ತದೆ.ಆರೋಗ್ಯದ ಕುರಿತು ಕಾಳಜಿ ಇರಲಿ.ಆರ್ಥಿಕವಾಗಿ ಇಂದು ನಿಮಗೆ ಖರ್ಚಿನ ದಿನ.

ಕುಂಭ: ಆಭರಣದ ಹೂಡಿಕೆ ವ್ಯವಹಾರಗಳಲ್ಲಿ ಲಾಭ ಇರಲಿದೆ. ಸಮೃದ್ಧಿ ತುಂಬಿದ ದಿನವಿರಲಿದೆ. ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ.

ಮೀನ: ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಅನಿರಿಕ್ಷಿತ ಲಾಭ ಸಿಗಲಿದೆ. ಸಮಸ್ಯೆಗಳ ಕುರಿತು ಚಿಂತೆ ಮಾಡುವುದು ಬೇಡ. ಆರೋಗ್ಯ ಪರಿಪೂರ್ಣ ಇರಲಿದೆ. ಆರ್ಥಿಕವಾಗಿ ಸದೃಢ ವಾತಾವರಣ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

RELATED ARTICLES

Related Articles

TRENDING ARTICLES