Friday, May 17, 2024

ರಾಜ್ಯದಲ್ಲಿ ಕಾಟನ್ ಕ್ಯಾಂಡಿ ನಿಷೇಧ : ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ : ದಿನೇಶ್ ಗುಂಡೂರಾವ್ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ರೋಡಮೈನ್-ಬಿ ಬಳಸಿರುವ ಕಾಟನ್ ಕ್ಯಾಂಡಿ ನಿಷೇಧ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲರ್ ಏಜೆಂಟ್‌ ಬಳಸದೇ ಇರುವ ಗೋಬಿ ಮಂಚೂರಿಗೆ ಅವಕಾಶ ಇದೆ ಎಂದರು.

ಒಂದು ವೇಳೆ ಕಲರ್ ಏಜೆಂಟ್ ಬಳಸಿರುವುದು ಕಂಡುಬಂದಲ್ಲಿ 7 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ . ಬಿಳಿ ಬಣ್ಣದ ಕಾಟನ್ ಕ್ಯಾಂಡಿಗೆ ಅವಕಾಶ ನೀಡಲಾಗಿದೆ. ಕಲರ್ ಏಜೆಂಟ್ ಬಳಸದೇ ಇರುವ ಕಾಟನ್ ಕ್ಯಾಂಡಿಗೆ ರಾಜ್ಯದಲ್ಲಿ ಅವಕಾಶ ಇದೆ ಎಂದು ಹೇಳಿದರು.

ಕಾಟನ್ ಕ್ಯಾಂಡಿಯ 25 ಮಾದರಿಗಳನ್ನ ಸಂಗ್ರಹಿಸಿದ್ದು, ಇದರಲ್ಲಿ 15 ಮಾದರಿಗಳಲ್ಲಿ ಅಸುರಕ್ಷಿತ ಕೃತಕ ಬಣ್ಣ ಪತ್ತೆಯಾಗಿದೆ. ಹೀಗಾಗಿ, ಕಾಟನ್ ಕ್ಯಾಂಡಿಯನ್ನ ಬಳಸುವುದು ಸುರಕ್ಷಿತವಲ್ಲ. ಈ ರೀತಿ ಯಾರು ಅಸುರಕ್ಷಿತ ಕೃತಕ ಬಣ್ಣ ಬಳಸಿದರೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

171 ಗೋಬಿ ಸ್ಯಾಂಪಲ್ ಮಾದರಿ ಸಂಗ್ರಹ

ಗೋಬಿ ಮಂಚೂರಿಯ ಮಾದರಿ ಸಂಗ್ರಹಣೆ ಮಾಡಿದರು. ಒಟ್ಟು 171 ಗೋಬಿ ಸ್ಯಾಂಪಲ್ ಮಾದರಿಯನ್ನ ಸಂಗ್ರಹಿಸಲಾಗಿದೆ. ಇದರಲ್ಲಿ 107 ಮಾದರಿಯಲ್ಲಿ ಕೃತಕ ಬಣ್ಣ ಪತ್ತೆಯಾಗಿದೆ. ಗೋಬಿಯಲ್ಲಿ ಟ್ರಾರ್‌ಟ್ರಾಸೈನ್, ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಕೃತಕ ಬಣ್ಣಗಳು ಪತ್ತೆಯಾಗಿದೆ. ಹಾಗೂ ಟ್ರಾರ್‌ಟ್ರಾಸೈನ್, ಸನ್‌ಸೆಟ್ ಯೆಲ್ಲೋ ಮತ್ತು ರೋಡಮೈನ್- ಬಿ ಪತ್ತೆಯಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

RELATED ARTICLES

Related Articles

TRENDING ARTICLES