Saturday, May 18, 2024

ಸುಳ್ಳು ಹೇಳಿದ್ರಾ ಡಿಕೆಶಿ? : BJP 50 ಕೋಟಿ ಆಫರ್ ಮಾಡಿದ್ದು ಸುಳ್ಳು.. ಸುಳ್ಳು.. ಎಂದ ಶಾಮನೂರು ಶಿವಶಂಕರಪ್ಪ

ದಾವಣಗೆರೆ : ಕಾಂಗ್ರೆಸ್​ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೂಲಕ ಬಿಜೆಪಿ ಆಪರೇಷನ್ ಕಮಲ ಮಾಡಲು ಯತ್ನಿಸಿತ್ತು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪವನ್ನು ಸ್ವತಂ ಶಾಮನೂರು ಶಿವಶಂಕರಪ್ಪ ಅಲ್ಲಗೆಳೆದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು 50 ಕೋಟಿ ರೂ. (ಆಪರೇಷನ್ ಕಮಲ) ಆಫರ್ ಮಾಡಿದ್ದು ಸುಳ್ಳು.. ಸುಳ್ಳು.. ಎಂದು ಸ್ಪಷ್ಟನೆ ನೀಡಿದರು. ಶಾಮನೂರು ಶಿವಶಂಕರಪ್ಪ ಹೇಳಿಕೆಯಿಂದ ಸುಳ್ಳು ಹೇಳಿದ್ರಾ ಡಿಕೆಶಿ..? ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಡಿಕೆಶಿ ಯಾಕೆ ಹೀಗೆ ಹೇಳಿದ್ರು? ಅವರನ್ನೇ ಕೇಳಿ

ನನ್ನನ್ನೂ ಯಾರು ಸಂಪರ್ಕ ಮಾಡಿಲ್ಲ. ಡಿ.ಕೆ. ಶಿವಕುಮಾರ್ ಯಾಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿಯವರು ಯಾರು ಸಹ ನನ್ನನ್ನೂ ಸಂಪರ್ಕ ಮಾಡಿಲ್ಲ. ಡಿಕೆಶಿ ಯಾಕೆ ಹೀಗೆ ಹೇಳಿದ್ರು? ಅವರನ್ನೇ ಕೇಳಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

50 ಕೋಟಿ ಏನು? 100 ಕೋಟಿ ಬೇಕಾದ್ರು ಕೊಡ್ತಾರೆ

ಯಾರಿಗಾದರೂ 50 ಕೋಟಿ ಆಫರ್ ಮಾಡ್ತಾರೆ, ಮಾಡಿರಬಹುದು. ನನಗಂತೂ ಕೇಳಿಲ್ಲ. ಬಿಜೆಪಿಯವರ ಬಳಿ ದುಡ್ಡು ಇದೆ, 50 ಕೋಟಿ ಏನು? 100 ಕೋಟಿ ಬೇಕಾದರೂ ಕೊಡ್ತಾರೆ. ರಾಜ್ಯಸಭೆ ಚುನಾವಣೆಯಲ್ಲಿ ವೋಟ್ ಕೇಳೋಕೆ ಹಕ್ಕು ಇದೆ. ವಿರೋಧ ಪಕ್ಷಗಳು ಕೇಳ್ತಾರೆ, ಹೋಗ್ತಾರೆ. ರಾಜ್ಯಸಭೆಗೆ ಸಹಾಯ ಕೇಳಿದ್ರು. ದುಡ್ಡಿನ ಸಹಾಯ ಮಾಡ್ತಿವಿ, ವೋಟ್ ಸಹಾಯ ಮಾಡಲ್ಲ ಅಂತ ಹೇಳಿದ್ದೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಕಾಂಗ್ರೆಸ್​ ಶಾಸಕರಿಗೆ ಬಿಜೆಪಿಯವರು ತಲಾ 50 ಕೋಟಿ ಆಫರ್ ನೀಡಿದ್ದಾರೆ. ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಶಾಸಕರಿಗೆ ತಲಾ 50 ಕೋಟಿ ನೀಡಿ ಸರ್ಕಾರ ಬೀಳಿಸಲು ಮುಂದಾಗಿದ್ದರು. ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನೂ ಬಿಜೆಪಿಯವರು ಸಂಪರ್ಕಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದರು.

RELATED ARTICLES

Related Articles

TRENDING ARTICLES