Friday, May 17, 2024

ಚಾಕೋಲೆಟ್ ಖರೀದಿಸಲು ಬಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್

ರಿಪ್ಪನ್‌ಪೇಟೆ: ದಿನಸಿ ಅಂಗಡಿಗೆ ಚಾಕೋಲೆಟ್ ಖರೀದಿಸಲು ಬಂದ ಎಂಟು ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿಯೊಬ್ಬನು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಂದ್ರಪ್ಪ (52) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

 ಘಟನೆಯ ವಿವರ

ಭಾನುವಾರ ಸಂಜೆ ಸಮಯದಲ್ಲಿ ಆರೋಪಿ ಚಂದ್ರಪ್ಪನಿಗೆ ಸೇರಿದ ದಿನಸಿ ಅಂಗಡಿಗೆ ಚಾಕೋಲೆಟ್ ಖರೀದಿಸಲು ಬಂದ ಎಂಟು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ. ನಂತರದಲ್ಲಿ ಈ ವಿಷಯ ಯಾರಿಗೂ ತಿಳಿಸದಂತೆ 10 ರೂ. ನೀಡಿ ನಾಳೆ ಬಾ ಮತ್ತಷ್ಟು ಚಾಕೊಲೇಟ್ ಕೊಡುತ್ತೇನೆ ಎಂದಿದ್ದಾನೆ. ಆ ನಂತರದಲ್ಲಿ ಬಾಲಕಿ ಅಳುತ್ತಾ ಮನೆಗೆ ಹೋಗಿ ಪೋಷಕರಿಗೆ ವಿಷಯವನ್ನು ತಿಳಿಸಿದ್ದಾಳೆ.

ತಕ್ಷಣ ಬಾಲಕಿಯ ಪೋಷಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಚಂದ್ರಪ್ಪನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES