Monday, May 20, 2024

ಲೋಕಸಭಾ ಎಲೆಕ್ಷನ್ ನಲ್ಲಿ ಗೆಲ್ತಾರಾ ದೊಡ್ಮನೆ ಸೊಸೆ, ಈಡೇರುತ್ತಾ ಶಿವಣ್ಣನ ಆಸೆ..?

ಫಿಲ್ಮಿಡೆಸ್ಕ್​: ನಟ ಡಾ.ಶಿವರಾಜ್​ಕುಮಾರ್ ಪತ್ನಿ, ಚಿತ್ರ ನಿರ್ಮಾಪಕಿ ಮತ್ತು ದೊಡ್ಮನೆ ಸೊಸೆಯಾಗಿರೋ ಗೀತಾ ಶಿವರಾಜ್​ಕುಮಾರ್ ರಾಜಕೀಯಕ್ಕೆ ಬಂದು ಬಹುದಿನಗಳೇ ಆಯ್ತು. 2014ರಲ್ಲೇ ಶಿವಮೊಗ್ಗದಿಂದ ಲೋಕಸಭೆಗೆ ಸ್ಪರ್ದಿಸಿದ್ದ ಗೀತಾ ಶಿವರಾಜ್​ಕುಮಾರ್​ಗೆ ಈ ಬಾರಿ ಕಾಂಗ್ರೆಸ್​​ನಿಂದ ಟಿಕೆಟ್ ಸಿಕ್ಕಿದೆ. ಹಾಗಾದ್ರೆ ದೊಡ್ಮನೆ ಸೊಸೆ ಗೆಲ್ತಾರಾ..? ಅವರ ಪರ ಯಾರೆಲ್ಲಾ ನಿಲ್ತಾರೆ..? ಈ ಬಗ್ಗೆ ಸಿನಿಲೋಕದಲ್ಲಿ ಏನ್ ಚರ್ಚೆ ನಡೀತಾ ಇದೆ..? ಅದೆಲ್ಲದರ ಕುರಿತ ಮಾಹಿತಿ ಇಲ್ಲಿದೆ.

ಕಾಂಗ್ರೆಸ್​ ಪಕ್ಷದಿಂದ ಈ ಬಾರಿ ಲೋಕಸಭೆಗೆ ಸ್ಪರ್ದಿಸೋ ಅಭ್ಯರ್ಥಿಗಳ ಮೊದಲ ಲಿಸ್ಟ್ ಬಿಡುಗಡೆಯಾಗಿದ್ದು ಅದರಲ್ಲಿ ಗೀತಾ ಶಿವರಾಜ್​ಕುಮಾರ್ ಹೆಸರು ಕೂಡ ಇದೆ. ಶಿವಮೊಗ್ಗದಿಂದ ಗೀತಕ್ಕ ಲೋಕಸಭೆಗೆ ಸ್ಪರ್ದಿಸೋದು ಫಿಕ್ಸ್ ಆಗಿದೆ. ಸೋ ದೊಡ್ಮನೆ ಸೊಸೆ ಮತ್ತೊಮ್ಮೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಭೀತಿ; ಮೈಸೂರಿನಿಂದ ಯದುವೀರ್‌ ಸ್ಪರ್ಧೆ?

ಅಸಲಿಗೆ ಗೀತಾ ಶಿವರಾಜ್​ಕುಮಾರ್ ದೊಡ್ಮನೆ ಸೊಸೆಯಾಗೋದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಮಗಳು. ಗೀತಾ ಅವರ ಸಹೋದರ ಮಧು ಸದ್ಯ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದಾರೆ. ಸೋ ಅಣ್ಣಾವ್ರ ಫ್ಯಾಮಿಲಿಗೆ ರಾಜಕೀಯವೇ ದೂರವೇ ಆದ್ರೂ ಗೀತಕ್ಕನ ಫ್ಯಾಮಿಲಿಗೆ ರಾಜಕಾರಣ ಬಲು ಹತ್ತಿರ.

ಅಸಲಿಗೆ ಗೀತಾ ಶಿವರಾಜ್​ಕುಮಾರ್ 2014ರಲ್ಲೇ ಮೊದಲ ಬಾರಿ ಲೋಕಸಭೆಗೆ ಸ್ಪರ್ದೆ ಮಾಡಿದ್ದರು. ಆಗ ದೊಡ್ಮನೆ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಸುಳ್ಳಲ್ಲ. ಖುದ್ದು ಪುನೀತ್ ಕೂಡ ಈ ವಿಚಾರದಲ್ಲಿ ಅಣ್ಣ ಅತ್ತಿಗೆಯಿಂದ ಅಂತರ ಕಾದುಕೊಂಡಿದ್ದರು. ಯಾವ ಸಿನಿಮಾ ತಾರೆಯರು ಕೂಡ ಇವರ ಬೆಂಬಲಕ್ಕೆ ನಿಲ್ಲಲಿಲ್ಲ. ಸೋ 2014ರಲ್ಲಿ ಜೆಡಿಎಸ್​​ನಿಂದ ಸ್ಪರ್ದೆ ಮಾಡಿದ್ದ ಗೀತಕ್ಕ ಸೋಲುಂಡಿದ್ದರು.

ಆದ್ರೆ, ಈ ಬಾರಿ ಕಾಂಗ್ರೆಸ್ ಪಕ್ಷವನ್ನ ಸೇರಿರೋ ಗೀತಾ ಶಿವರಾಜ್​ಕುಮಾರ್​ಗೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ. ಸಹೋದರ ಮಧು ಬಂಗಾರಪ್ಪ ಸಚಿವನಾಗಿರೋದು ಗೀತಕ್ಕನ ಬಲ ಹೆಚ್ಚಿಸಿದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ಗೀತಾ ಶಿವರಾಜ್​​ಕುಮಾರ್ ಸಿನಿಮಾರಂಗದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಶಿವರಾಜ್​ಕುಮಾರ್ ನಟನೆಯ ವೇದ ಸಿನಿಮಾವನ್ನ ನಿರ್ಮಾಣ ಮಾಡಿದ್ದರು,, ಮತ್ತೀಗ ಬೈರತಿ ರಣಗಲ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಸೋ, ಈ ಬಾರಿ ಅನೇಕ ಚಿತ್ರತಾರೆಯರು ಗೀತಾ ಶಿವರಾಜ್​ಕುಮಾರ್ ಪರ ಪ್ರಚಾರ ಮಾಡುವ ನಿರೀಕ್ಷೆ ಇದೆ. ಇನ್ನೂ ಶಿವಣ್ಣ ಅಂತೂ ಪತ್ನಿ ಜೊತೆಗೆ ಇದ್ದೇ ಇರ್ತಾರೆ. ಇತ್ತೀಚಿಗಷ್ಟೇ ಶಿವರಾಜ್​​ಕುಮಾರ್ ತಮ್ಮ ಪತ್ನಿಯನ್ನ ಲೋಕಸಭೆಯಲ್ಲಿ ನೋಡುವ ಆಸೆ ಇದೆ ಅಂತ ಹೇಳಿಕೊಂಡಿದ್ದರು.

ಒಟ್ಟಾರೆ ಲೋಕಸಭಾ ಚುನಾವಣೆ ರಂಗೇರ್ತಾ ಇದ್ದು, ಸಿನಿಲೋಕದಿಂದ ಮೊದಲ ವ್ಯಕ್ತಿಯಾಗಿ ಗೀತಾ ಶಿವರಾಜ್​ಕುಮಾರ್ ಅಖಾಡಕ್ಕೆ ಇಳಿದಿದ್ದಾರೆ. ಶಿವಮೊಗ್ಗದಿಂದ ಗೀತಕ್ಕನಿಗೆ ಟಿಕೆಟ್ ಫೈನಲ್ ಆಗಿದ್ದು ದೊಡ್ಮನೆ ಸೊಸೆ ಗೆಲ್ತಾರಾ.. ಲೋಕಸಭೆಗೆ ಎಂಟ್ರಿ ಕೊಟ್ಟು ಶಿವಣ್ಣನ ಆಸೆ ಈಡೇರಿಸ್ತಾರಾ ಕಾದುನೋಡಬೇಕು,

ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES