Friday, May 17, 2024

ಮಹಾಶಿವರಾತ್ರಿ ಮೆರಗು ಹೆಚ್ಚಿಸಿದ ಹಳ್ಳಿಕಾರ್ ಸೌಂದರ್ಯ ಸ್ಪರ್ಧೆ: ನೂರಕ್ಕು ಹೆಚ್ಚು ಹಸುಗಳು ಭಾಗಿ!

ದೊಡ್ಡಬಳ್ಳಾಪುರ : ಮಹಾಶಿವರಾತ್ರಿ ಪ್ರಯುಕ್ತ ಹಳ್ಳಿಕಾರ್​ ತಳಿಯ ಹಸುಗಳ ಸೌಂದರ್ಯ ಸ್ಪರ್ಧೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸರ್ಧೆಯಲ್ಲಿ ನೂರಕ್ಕು ಹೆಚ್ಚು ಹಸುಗಳು ಭಾಗವಹಿಸಿ ಸೌಂದರ್ಯ ಪ್ರದರ್ಶಿಸಿದವು.

ವೇದಿಕೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಹರೀಶ್ ಗೌಡ, ಹಳ್ಳಿಕಾರ್ ತಳಿ ರಾಸುಗಳು ಇಡೀ ಕರ್ನಾಟಕದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಇರುವ ದೇಶಿ ತಳಿ ಹಸುಗಳು. ಇವುಗಳ ವಿಶೇಷವೆಂದರೆ ಇವುಗಳ ಆಲ್ರೌಂಡ್ ಗುಣ. ಜಮೀನಿನ ಉಳಿಮೆ ಕೆಲಸ, ಎತ್ತಿನ ಗಾಡಿ ಕೆಲಸ, ಗಾಣದ ಕೆಲಸ ಇತ್ಯಾದಿ ಕಠಿಣ ಕೆಲಸಗಳೊಂದಿಗೆ ಉತ್ತಮ ಗುಣಮಟ್ಟದ ಹಾಲು ಕೊಡುವುದು, ಅದರ ಜೊತೆಜೊತೆಗೆ ಈ ತಳಿಯ ಎತ್ತುಗಳನ್ನು ಎತ್ತಿನ ಗಾಡಿ ಸ್ಪರ್ಧೆ, ಜಾತ್ರೆಗಳಲ್ಲಿ ಜೋಡೆತ್ತುಗಳ ಪ್ರದರ್ಶನದಲ್ಲಿ ಪ್ರತಿಷ್ಠೆಯಾಗಿ ಪರಿಗಣಿಸಿ ಸಾಕುವುದಕ್ಕೂ ಬಳಸುತ್ತಾರೆ ಎಂದರು.

ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ ಹಳ್ಳಿಕಾರ್ ತಳಿ ದನಗಳು ಈಗೀಗ ಕಣ್ಮರೆಯಾಗುತ್ತಿವೆ. ವ್ಯವಸಾಯದ ಕೆಲಸಗಳು ಯಾಂತ್ರಿಕವಾಗಿ ದನಗಳನ್ನು ವ್ಯವಸಾಯಕ್ಕಾಗಿ ಸಾಕುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಹಾಲಿನ ಉತ್ಪಾದನೆಗಾಗಿ ಮಿಶ್ರತಳಿ ಹಸುಗಳನ್ನು ಸಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ಭಾರತದ ಪರಂಪರೆಯ ಸಂಪತ್ತಾಗಿರುವ ಭವ್ಯವಾದ ಹಳ್ಳಿಕಾರ್ ತಳಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಇದನ್ನೂ ಓದಿ: ಡಿಎಂಕೆ ಗೆ ಬೆಂಬಲ ಸೂಚಿಸಿದ ನಟ ಕಮಲ್ ಹಾಸನ್​!

ಸ್ಪರ್ಧೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಭಾಗವಹಿಸಿ ತಮ್ಮ ಸೌಂದರ್ಯ ಪ್ರದರ್ಶಿಸಿದವು. ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್, ಸೈಕ್ ನವಾಜ್ ಸೇರಿದಂತೆ ವಿವಿಧ ಚಲನಚಿತ್ರ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮ ಮೆರುಗು ಹೆಚ್ಚಿಸಿದರು. ಕಾರ್ಯಕ್ರಮ ಅಂಗವಾಗಿ ಗ್ರಾಮದ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ಪುಟಾಣಿ ಮಕ್ಕಳು ಯೋಗ ಪ್ರದರ್ಶನ ವಿಶೇಷವಾಗಿತ್ತು.

ಹಳ್ಳಿಕಾರ್ ರಾಸುಗಳ ಸೌಂದರ್ಯ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ತೇರಿನ ಬೀದಿ ಬಾಬು ಮಾಲಿಕತ್ವದ ರಾಸುಗಳಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ನಗದು ಮತ್ತು ಫಲಕ, ಕುಂಟನಹಳ್ಳಿ ರುದ್ರೇಗೌಡರ ರಾಸುಗಳಿಗೆ ದ್ವಿತೀಯ ಬಹುಮಾನವಾಗಿ 10 ಸಾವಿರ ನಗದು ಮತ್ತು ಫಲಕ, ನಾಗೇನಹಳ್ಳಿ ಅಶ್ವತ್ ನಾರಾಯಣ ಮಾಲೀಕತ್ವದ ರಾಸುಗಳಿಗೆ ತೃತೀಯ ಬಹುಮಾನವಾಗಿ 5000 ನಗದು ಮತ್ತು ಫಲಕ ವಿತರಿಸಲಾಯಿತು. ಹಾಗೂ ಭಾಗವಹಿಸಿದ ಎಲ್ಲಾ ಮಾಲೀಕರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು ಎಂದು ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಅಪ್ಪಯ್ಯಣ್ಣ,  ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ, ತಾಲೂಕು ಅಧ್ಯಕ್ಷರಾದ ಕಾಡುನೂರು ಮೂರ್ತಿ, ಕನ್ನಡಪರ ಹೋರಾಟಗಾರರಾದ ಸಂಜೀವ್ ನಾಯಕ್, ರೈತ ಮುಖಂಡರಾದ, ತುರುವನಳ್ಳಿ ವಾಸು, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ. ನಗರಸಭಾ ಸದಸ್ಯ ಮಲ್ಲೇಶ್, ಮುಖಂಡರಾದ ಪ್ರತಾಪ್, ಮುನಿಯಪ್ಪ, ಮಂಜುನಾಥ್, ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ, ಪದಾಧಿಕಾರಿಗಳಾದ ಶ್ರೀಧರ್, ಮುಬಾರಕ್, ನಾಗರಾಜು, ಚೇತನ್, ವಿಕಾಸ್, ಹಾಗೂ ಸದಸ್ಯರು, ರೈತರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES