Friday, May 17, 2024

100ನೇ ಟೆಸ್ಟ್ ಪಂದ್ಯದಲ್ಲಿ ಕೆಟ್ಟ ದಾಖಲೆ ಬರೆದ ಅಶ್ವಿನ್

ಬೆಂಗಳೂರು : ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ನಲ್ಲಿ ತನ್ನ 100ನೇ ಪಂದ್ಯ ಆಡಿದ ಭಾರತದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಕೆಟ್ಟ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಅಶ್ವಿನ್ ಶೂನ್ಯಕ್ಕೆ (ಗೋಲ್ಡನ್ ಡಕೌಟ್) ನಿರ್ಗಮಿಸಿ ನಿರಾಸೆ ಮೂಡಿಸಿದರು.

100ನೇ ಟೆಸ್ಟ್ ಪಂದ್ಯದಲ್ಲಿ ಡಕೌಟ್​ ಆದ ಮೂರನೇ ಭಾರತೀಯ ಕ್ರಿಕೆಟಿಗ ಹಾಗೂ ಒಟ್ಟಾರೆ 9ನೇ ಆಟಗಾರರ ಎನಿಸಿಕೊಂಡರು. 1988ರಲ್ಲಿ 100ನೇ ಟೆಸ್ಟ್ ಪಂದ್ಯ​ ಆಡಿದ ದಿಲೀಪ್ ವೆಂಗದ ಸರ್ಕರ್ ಡಕೌಟ್​ ಆದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಆ ನಂತರ 2023ರಲ್ಲಿ ಪೂಜಾರ ಕೂಡ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿದ್ದರು.

100ನೇ ಟೆಸ್ಟ್​ನಲ್ಲಿ ವಿಶೇಷ ಕ್ಯಾಪ್

100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅಶ್ವಿನ್ ತಂಡದ ಕೋಚ್​ ರಾಹುಲ್ ದ್ರಾವಿಡ್​ ಅವರಿಂದ ವಿಶೇಷ ಕ್ಯಾಪ್ ಸ್ವೀಕರಿಸಿದರು. ಈ ಒಂದು ಅವಿಸ್ಮರಣೀಯ ಕ್ಷಣಕ್ಕೆ ಅಶ್ವಿನ್ ಅವರ ಪತ್ನಿ, ಮಕ್ಕಳು ಸಾಕ್ಷಿಯಾದರು. ಅಶ್ವಿನ್ ಭಾರತದ ಪರವಾಗಿ ಈ ಗೌರವ ಪಡೆದ 14ನೇ ಆಟಗಾರರಾಗಿದ್ದಾರೆ.

100 ಟೆಸ್ಟ್​ ಆಡಿದ ಭಾರತೀಯರು

ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ವೆಂಗ್ ಸರ್ಕಾರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲ್ಷ್ಮಣ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇನ್ನೂ, ಭಾರತದ ಸರ್ವಕಾಲಿಕ ಶ್ರೇಷ್ಠ ನಾಯಕ ಮಿಸ್ಟರ್ ಕೂಲ್ ಎಂ.ಎಸ್ ಧೋನಿ 99 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

RELATED ARTICLES

Related Articles

TRENDING ARTICLES