Saturday, May 4, 2024

ಗ್ಯಾಂಗ್​ರೇಪ್: ನ್ಯಾಯಾಲಯಕ್ಕೆ 873 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

ಹಾವೇರಿ: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ, ರಾಜಕೀಯವಾಗಿಯೂ ಬಹಳ ಚರ್ಚೆಗೆ ಗ್ರಾಸವಾಗಿದ್ದ ಹಾವೇರಿಯ ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಗ್ಯಾಂಗ್​ರೇಪ್ ನಡೆದು 58 ದಿನಗಳ ಬಳಿಕ ಹಾನಗಲ್ ಜೆಎಂಎಫ್​ ಕೋರ್ಟ್​ಗೆ 873 ಪುಟಗಳ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ಜನವರಿ 8ರಂದು ಹಾನಗಲ್ ಬಳಿ ಶಿರಸಿ ಮೂಲದ ಮುಸ್ಲಿಂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣ ಸಂಬಂಧ 19 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಹಿಂದೂ ಸಮಾಜ ಬಾಂಬ್​ ದಾಳಿಗಳಿಗೆ ಬೆದರುವುದಿಲ್ಲ : ಪ್ರಮೋದ್​ ಮುತಾಲಿಕ್​

ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಲಾಗಿದ್ದ 7 ಪ್ರಮುಖ ಆರೋಪಿಗಳು ಸೇರಿ ಒಟ್ಟು 19 ಮಂದಿಯ ಹೆಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ವಿಚಾರಣೆ ವೇಳೆ 7 ಪ್ರಮುಖ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದರು. ಘಟನೆ ಸಂಬಂಧ ತನಿಖೆಯನ್ನು 20 ದಿನಗಳ ಹಿಂದೆಯೇ ಹಾನಗಲ್ ಪೊಲೀಸರು ಪೂರ್ಣಗೊಳಿಸಿದ್ದರು. ಆದರೆ ಎಫ್​​ಎಸ್​ಎಲ್ ವರದಿ ಹಾಗೂ ಡಿಎನ್​ಎ ವರದಿಗಳಿಗಾಗಿ ಪೊಲೀಸರು ಕಾದುಕುಳಿತಿದ್ದರು. ಇದೀಗ ಅವುಗಳು ದೊರೆಯುತ್ತಿದ್ದಂತೆಯೇ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES