Saturday, May 18, 2024

ವಯಸ್ಸು 22, ಪಂದ್ಯ 9, 3 ಶತಕ, 2 ದ್ವಿಶತಕ : 1,451 ಬಾಲ್​​ಗಳಲ್ಲಿ 1,004* ರನ್ ಚಚ್ಚಿದ ‘ರೆಕಾರ್ಡ್ ಕಿಂಗ್’

ಬೆಂಗಳೂರು : ಈತನ ವಯಸ್ಸು ಕೇವಲ 22 ವರ್ಷ. ಈವರೆಗೆ ಆಡಿರುವುದು 9 ಟೆಸ್ಟ್​ ಪಂದ್ಯಗಳು. ಬಾರಿಸಿದ್ದು 3 ಶತಕ, 2 ದ್ವಿಶತಕ ಹಾಗೂ 4 ಅರ್ಧಶತಕ. ತಾನಾಡಿರುವ 1,451 ಬಾಲ್​ಗಳಲ್ಲಿ ಚಚ್ಚಿದ್ದು 1,004 ರನ್​ಗಳು.

ಹೌದು, ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ಹೊಸ ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ. ಆತ ಬೇರೆ ಯಾರೂ ಅಲ್ಲ.. ಭಾರತ ಭವಿಷ್ಯದ ಧ್ರುವತಾರೆ ‘ರೆಕಾರ್ಡ್ ಕಿಂಗ್’ ಯಶಸ್ವಿ ಜೈಸ್ವಾಲ್.

ಇದೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡರು. ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್​ (712) ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಇಂದಿನ ಪಂದ್ಯದಲ್ಲಿ ಒಂದು ರನ್ ಗಳಿಸುವ ಮೂಲಕ ಈ ಮೈಲಿಗಲ್ಲನ್ನು ಸಾಧಿಸಿದರು.

ಟೆಸ್ಟ್ ಕ್ರಿಕೆಟ್​ನಲ್ಲಿ (ಇನ್ನಿಂಗ್ಸ್​ಗಳು) ವೇಗವಾಗಿ 1000 ರನ್‌ ಗಳಿಸಿದ ಭಾರತದ ಬ್ಯಾಟರ್ ಪೈಕಿ ಎರಡನೇ ಸ್ಥಾನ, 1,000 ರನ್‌ ಪೂರೈಸಿದ 4ನೇ ಅತ್ಯಂತ ಕಿರಿಯ ಭಾರತೀಯ ಎಂಬ ಶ್ರೇಯಕ್ಕೂ ಯಶಸ್ವಿ ಜೈಸ್ವಾಲ್ ಪಾತ್ರರಾದರು. ರೆಕಾರ್ಡ್​ ಕಿಂಗ್ ಆರ್ಭಟಕ್ಕೆ ಸಚಿನ್, ವಿರಾಟ್ ಕೊಹ್ಲಿ, ಸುನೀಲ್ ಗವಾಸ್ಕರ್ ಅವರ ದಾಖಲೆಗಳೆಲ್ಲಾ ಉಡೀಸ್ ಆಗಿದೆ.

9 ಪಂದ್ಯ, 16 ಇನ್ನಿಂಗ್ಸ್​ಗಳಲ್ಲಿ 1,000 ರನ್ ಪೂರೈಕೆ

  • ಪಂದ್ಯಗಳು : 09
  • ಇನ್ನಿಂಗ್ಸ್ :16
  • ರನ್​ಗಳು : 1,028*
  • ಬಾಲ್​ಗಳು : 1,467
  • ಸರಾಸರಿ : 68.53
  • ಸ್ಟ್ರೈಕ್ ರೇಟ್ : 70.07
  • ಶತಕ : 3
  • ದ್ವಿಶತಕ : 2
  • ಅರ್ಧಶತಕಗಳು : 4
  • ಬೌಂಡರಿಗಳು : 108
  • ಸಿಕ್ಸರ್​ಗಳು : 29

ಭಾರತದ ಪರ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು

  • 774 : ಸುನಿಲ್ ಗವಾಸ್ಕರ್ (ವೆಸ್ಟ್ ಇಂಡೀಸ್), 1971
  • 732 : ಸುನಿಲ್ ಗವಾಸ್ಕರ್ (ವೆಸ್ಟ್ ಇಂಡೀಸ್), 1978-79
  • 712 : ಯಶಸ್ವಿ ಜೈಸ್ವಾಲ್ (ಇಂಗ್ಲೆಂಡ್), 2024*
  • 692 : ವಿರಾಟ್ ಕೊಹ್ಲಿ (ಆಸ್ಟ್ರೇಲಿಯಾ), 2014-15
  • 655 : ವಿರಾಟ್ ಕೊಹ್ಲಿ (ಇಂಗ್ಲೆಂಡ್), 2016

ವೇಗವಾಗಿ 1000 ರನ್‌ ಗಳಿಸಿದ ಭಾರತದ ಬ್ಯಾಟರ್ (ಇನ್ನಿಂಗ್ಸ್​ಗಳು)

  • ವಿನೋದ್ ಕಾಂಬ್ಳಿ : 14 ಇನ್ನಿಂಗ್ಸ್
  • ಯಶಸ್ವಿ ಜೈಸ್ವಾಲ್ : 16 ಇನ್ನಿಂಗ್ಸ್
  • ಚೇತೇಶ್ವರ ಪೂಜಾರ : 18 ಇನ್ನಿಂಗ್ಸ್
  • ಮಯಾಂಕ್ ಅಗರ್ವಾಲ್ : 19 ಇನ್ನಿಂಗ್ಸ್
  • ಸುನಿಲ್ ಗವಾಸ್ಕರ್ : 21 ಇನ್ನಿಂಗ್ಸ್

1,000 ರನ್‌ ಪೂರೈಸಿದ ಅತ್ಯಂತ ಕಿರಿಯ ಭಾರತೀಯ

  • ಸಚಿನ್ ತೆಂಡೂಲ್ಕರ್ : 19 ವರ್ಷ, 217 ದಿನಗಳು
  • ಕಪಿಲ್ ದೇವ್ : 21 ವರ್ಷ, 27 ದಿನಗಳು
  • ರವಿಶಾಸ್ತ್ರಿ : 21 ವರ್ಷ, 197 ದಿನಗಳು
  • ಯಶಸ್ವಿ ಜೈಸ್ವಾಲ್ : 22 ವರ್ಷ 70 ದಿನಗಳು
  • ದಿಲೀಪ್ ವೆಂಗ್‌ಸರ್ಕರ್ : 22 ವರ್ಷ, 293 ದಿನಗಳು

ಕಡಿಮೆ ಪಂದ್ಯಗಳಲ್ಲಿ1,000 ರನ್‌ ಸಿಡಿಸಿದವರು

  • ಡಾನ್ ಬ್ರಾಡ್ಮನ್ : 7
  • ಯಶಸ್ವಿ ಜೈಸ್ವಾಲ್ : 9
  • ಎವರ್ಟನ್ : 9
  • ಹರ್ಬರ್ಟ್ : 9
  • ಜಾರ್ಜ್ ಹೆಡ್ಲಿ : 9

RELATED ARTICLES

Related Articles

TRENDING ARTICLES