Monday, May 20, 2024

ದೇಶದ ಮೊದಲ ಜಲಸುರಂಗ ಮೆಟ್ರೋ ಸೇವೆಗೆ ಪ್ರಧಾನಿ ಮೋದಿ ಚಾಲನೆ

ಕೊಲ್ಕತ್ತ : ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶದ ಮೊದಲ ಜಲಸುರಂಗ ಮಾರ್ಗದ ಮೆಟ್ರೋ ಸೇವೆಗೆ ಚಾಲನೆ ನೀಡಿದ್ದು ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸುವ ಮೂಲಕ ಪ್ರಧಾನಿಯವರು ನೂತನ ಮೆಟ್ರೋ ಸೇವೆಯನ್ನು ಲೋಕಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ:  ಮೋದಿ ಬಗ್ಗೆ ಮಾತನಾಡಲು ನೀವು ಯಾರು? ಸಿದ್ದು ವಿರುದ್ಧ ದೇವೇಗೌಡ ಟೀಕಾಪ್ರಹಾರ

ನೂತನ ಮೆಟ್ರೋ ಸೇವೆಯೂ ಕೊಲ್ಕತ್ತಾದ ಹೂಗ್ಲಿ ನದಿಯೊಳಗಿನ ಸುರಂಗ ಮಾರ್ಗದ ಮೂಲಕ ಹೌರಾ ಮತ್ತು ಎಸ್‌ಪ್ಲೇನೇಡ್ ನಡುವೆ ಮೆಟ್ರೊ ರೈಲು ಸಂಚರಿಸಲಿದೆ. ಕೋಲ್ಕತ್ತ ಮೆಟ್ರೊದ ಪೂರ್ವ-ಪಶ್ಚಿಮ ಕಾರಿಡಾರ್ ವ್ಯಾಪ್ತಿಯ ಈ ಯೋಜನೆಗೆ ಸುಮಾರು ₹ 4,965 ಕೋಟಿ ವೆಚ್ಚ ಮಾಡಲಾಗಿದೆ.

ಈ ಸುರಂಗದ ಉದ್ದ 520 ಮೀಟರ್ ಆಗಿದೆ. ನೀರಿನೊಳಗೆ ಮೆಟ್ರೊ ರೈಲಿನ ಸರಾಸರಿ ಪ್ರಯಾಣದ ಅವಧಿ 45 ಸೆಕೆಂಡುಗಳು. ರೈಲುಗಳು ಸುರಂಗದಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಬಹುದು ಎಂದು ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES