Friday, May 3, 2024

ಸರ್ಕಾರಿ FSL ವರದಿ ಬಂದಿಲ್ಲ,ಖಾಸಗಿ ವರದಿ ಗಣನೆಗೆ ತಗೆದುಕೊಳ್ಳಲ್ಲ: ಸಚಿವ ಜಿ.ಪರಮೇಶ್ವರ್‌ 

ಬೆಂಗಳೂರು: ಬಿಜೆಪಿ ಬಿಡುಗಡೆ ಮಾಡಿರುವ ಖಾಸಗಿ FSL ವರದಿ ಅಧಿಕೃತವಲ್ಲ ನಾವುಈ ವರದಿಯನ್ನು ಗಣನೆಗೆ ತಗೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು,ನಾವು ಖಾಸಗಿ ಸಂಸ್ಥೆ ವರದಿ ಗಣನೆಗೆ ತೆಗೆದುಕೊಳ್ಳಲ್ಲ. ಸರ್ಕಾರದ ಎಫ್‌ಎಸ್‌ಎಲ್‌, ಗೃಹ ಇಲಾಖೆಯ ಫಾರೆನ್ಸಿಕ್ ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಪಾಸಿಟಿವ್ ಆಗಿ, ಕೂಗಿರೋದು ದೃಢ ಅಂದ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆʼʼ ಎಂದು ಜಿ. ಪರಮೇಶ್ವರ್‌ ಹೇಳಿದ್ದಾರೆ.

ಸರ್ಕಾರ ವರದಿಯನ್ನು ಮುಚ್ಚಿಡುತ್ತಿದೆ ಎನ್ನುವ ಬಿಜೆಪಿ ಆರೋಪ, ಘಟನೆಯ ಮರುದಿನವೇ ಪ್ರಿಯಾಂಕ್ ಖರ್ಗೆ ವರದಿ ಬಂದಿದೆ ಎಂದು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಯಾವ ಅಧಾರದ ಮೇಲೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ಇದು ನಮ್ಮ‌ಇಲಾಖೆಗೆ ಸಂಬಂಧಿಸಿದ್ದು. ನಮ್ಮ ವರದಿ ಬಂದ ಮೇಲೆ ಹೇಳ್ತೀನಿ ಎಂದು ಹೇಳಿದರು.

ಎಫ್‌ಎಸ್‌ಎಲ್‌ ವರದಿ ಬಿಡುಗಡೆ ಮಾಡಲು ಖಾಸಗಿಯವರು ಯಾರು? ಅವರಿಗೆ NOC ಯಾರು ಕೊಟ್ಟಿದ್ದಾರೆ. ಅವರಿಗೆ ಈ ರೀತಿ ವರದಿ ಕೊಡಲು ಅನುಮತಿ ಇದೆಯಾ.? ಎಂದು ಹೇಳಿದ್ದರು.

 

RELATED ARTICLES

Related Articles

TRENDING ARTICLES