Monday, May 20, 2024

ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಸಂಸದ ಡಿ.ಕೆ ಸುರೇಶ್

ಬೆಂಗಳೂರು: ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಭಕ್ತಿ ಹೆಸರು ಹೇಳಿಕೊಂಡು ಬೆಂಗಳೂರಿನ ಭದ್ರತೆ ಹಾಳು ಮಾಡುವ ಕೆಲಸಗಳನ್ನು ವಿಪಕ್ಷಗಳು ಮಾಡ್ತಿವೆ. ಬಿಜೆಪಿ ಅವರಿಂದ ಬೆಂಗಳೂರಿಗೆ ಇರೋ ಕೀರ್ತಿ ಹಾಳು ಮಾಡೋ ‌ಕೆಲಸ ಆಗ್ತಿದೆ.ಯಾರೇ ಬಾಂಬ್ ಹಾಕಿದ್ರು ಸರ್ಕಾರ ಅವರ ವಿರುದ್ದ ಕ್ರಮಕ್ಕೆ ಕ್ರಮ ತೆಗೆದುಕೊಳ್ಳುತ್ತದೆ. ಆರ್. ಅಶೋಕ್ ಅವರು ಬಾಂಬ್ ಬೆಂಗಳೂರು  ಅಂದಿದ್ದು ಸರಿನಾ? ಬೆಂಗಳೂರನ್ನ ಗಾರ್ಬೇಜ್ ಸಿಟಿ ಮಾಡಿದ್ದು ಬಿಜೆಪಿ. 40% ಮಾಡಿದ್ದು ಇದೇ ಬಿಜೆಪಿ. ಹಸಿರು ಬೆಂಗಳೂರು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಈಗ ಇಂತಹ ಮಾತುಗಳನ್ನಾಡೋದು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಮಾತಿನ ಚಾಟಿ ಬೀಸಿದ್ದಾರೆ.

ವಿಪಕ್ಷ ನಾಯಕ ಅಶೋಕ್ ಅವರೇ ಕೇಂದ್ರ ಬಿಜೆಪಿ 10 ವರ್ಷಗಳಲ್ಲಿ ಬೆಂಗಳೂರಿಗೆ ಎಷ್ಟು ಅನುದಾನ ಕೊಟ್ಟಿದೆ ಮಾಹಿತಿ ಮೊದಲು ಬಿಡುಗಡೆ ಮಾಡಿ ಅಮೇಲೆ ನಿಮ್ಮ ಮಾತಿಗೆ ಉತ್ತರ ಕೊಡ್ತೀನಿ. ಭದ್ರತೆ, ಸಾರ್ವಜನಿಕರ ರಕ್ಷಣೆ ನಮಗೂ ಮುಖ್ಯನೇ. ಈ ಕೇಸ್ ಅನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕೇಂದ್ರದ ಜವಾಬ್ದಾರಿಯೂ ಇದರಲ್ಲಿ ಇದೆ. ಎರಡೂ ಸರ್ಕಾರಗಳು ಒಟ್ಟಾಗಿ ಈ ಪ್ರಕರಣದಲ್ಲಿ ಕೆಲಸ ಮಾಡ್ತಿವೆ. ಬೆಂಗಳೂರಿಗೆ 10 ವರ್ಷಗಳಲ್ಲಿ ಮೋದಿ ಸರ್ಕಾರ ಏನ್ ಅನುದಾನ ಕೊಟ್ಟಿದೆ ಅಂತ ಅಶೋಕ್ ಮಹಾರಾಜರು ಬಿಡುಗಡೆ ಮಾಡಬೇಕು. ಬೆಂಗಳೂರಿಗೆ ಕೇಂದ್ರ ಸರ್ಕಾರ ಎಷ್ಟು ಅನುದಾನ ಕೊಟ್ಟಿದೆ ಅಂತ ವಿತ್ತ ಸಚಿವೆ ಬಳಿ ಆದರು ಮಾಹಿತಿ ಪಡೆಯಲಿ. ಪ್ರಧಾನಿ ಕಚೇರಿಯಿಂದಾದರೂ ಮಾಹಿತಿ ತಿಳಿದುಕೊಂಡು ಹೇಳಲಿ. ಅ ಮೇಲೆ ಉಳಿದಿದ್ದಕ್ಕೆ ನಾನು ಉತ್ತರ ಕೊಡ್ತೀನಿ ಎಂದು ಆರ್​. ಅಶೋಕ್​ಗೆ ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಭಯೋತ್ಪಾದಕರೆಲ್ಲಾ‘ಕೈ’ ​ಸರ್ಕಾರ ಬಂದ್ಮೇಲೆ ಬಿಲದಿಂದ ಬಂದು ಹೊರಗೆ ಹುಲಿಗಳಾಗಿದ್ದಾರೆ: ಆರ್​. ಅಶೋಕ್​

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ಪಾಕ್ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಸಿಎಂ ಅವರು ಈಗಾಗಲೇ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಸಿಎಂ ಅವರು ತಪ್ಪು ಅಂತ ಹೇಳಿದ್ದಾರೆ. ವಿಧಾನಸೌಧದ ಕೇಸ್ ಮಾಧ್ಯಮಗಳು ತೋರಿಸಿದ್ರಿ ಆದರೆ ಮಂಡ್ಯದ RSS ಅವರು ಕೂಗಿದ್ದನ್ನ ಯಾಕೆ ದೊಡ್ಡದಾಗಿ ತೋರಿಸ್ತಿಲ್ಲ. ಬಿಜೆಪಿ, RSS ಅವರು ಕೂಗಿದ್ದು ಯಾಕೆ ದೊಡ್ಡದು ಮಾಡ್ತಿಲ್ಲ. ಮಾಧ್ಯಮಗಳು ಯಾಕೆ ಅ ವಿಷಯ ದೊಡ್ಡ ಮಾಡ್ತಿಲ್ಲ. ನಾವ್ ಹೇಳೋದು ಕೇಳ್ರಪ್ಪ. ಅವರು ಹೇಳೋದು, ಬೇರೆ ಅವರು ಹೇಳೋದು ಬಿಡಿ. ಮಾಧ್ಯಮಗಳು ಅನೇಕ ಬಾರಿ ವಿಷಯ ತಿರುಚಿದ್ದಾರೆ.

ಯಾವ ಯಾವ ಸಂಧರ್ಭದಲ್ಲಿ ಯಾವ ಯಾವ ವಿಷಯ ತಿರುಚಿದ್ದೀರಾ. ಕಳೆದ 10 ವರ್ಷಗಳಲ್ಲಿ ಬಿಜೆಪಿಯನ್ನ ಎಷ್ಟು ಪ್ರೊಜೆಕ್ಟ್ ಮಾಡಿದ್ದೀರಾ. 10 ವರ್ಷಗಳಲ್ಲಿ ಮಾಡಿರೋ ಬಿಜೆಪಿ ಪ್ರೊಜೆಕ್ಟ್ ಅನ್ನ ನೀವು ಗ್ರೌಂಡ್ ನಲ್ಲಿ ತೋರಿಸಿ. ಮಾಧ್ಯಮಗಳು 10 ವರ್ಷ ಪ್ರೊಜೆಕ್ಟ್ ಮಾಡಿರೋ ಕಾಮಗಾರಿ, ಕೆಲಸಗಳು, ಯೋಜನೆಗಳನ್ನ ಗ್ರೌಂಡ್ ನಲ್ಲಿ ಈಗ ತೋರಿಸಿ ನೋಡೋಣ. ಎಲ್ಲೆಲ್ಲೆ ಬಿಟ್ಟು ಹೋಗಿದೆ, ಎಲ್ಲೆಲ್ಲಿ ಕಳೆದು ಹೋಗಿದೆ ಅಂತ ನಿಮಗೆ ಗೊತ್ತಾಗುತ್ತದೆ. ನಿಮ್ಮ ಬಗ್ಗೆ ಗೌರವ ಇದೆ. ಆದರೆ ನಮ್ಮನ್ನು ಕನ್ಸಿಡರ್ ಮಾಡಿ ಎಂದು ಮಾಧ್ಯಮಗಳ ಮೇಲೆನೇ ಗೂಬೆ ಕೂರಿಸಿದ್ದಾರೆ.

RELATED ARTICLES

Related Articles

TRENDING ARTICLES