Friday, May 17, 2024

ಗೃಹ ಸಚಿವ ಜಿ ಪರಮೇಶ್ವರ್ ಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ಸುತ್ತೆ: ಎಂ.ಪಿ ರೇಣುಕಾಚಾರ್ಯ

ದಾವಣಗೆರೆ: ಗೃಹ ಸಚಿವ ಜಿ ಪರಮೇಶ್ವರ್ ಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ಸುತ್ತೆಎಂದು ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. 

ಸುದ್ದಿಗಾರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಬಾಬರ ಟಿಪ್ಪು ಸರ್ಕಾರವಿದೆ. ವಿಧಾನಸೌಧದಲ್ಲಿ ಪಾಕ್ ಪರ ಜಿಂದಾಬಾದ್ ಕೂಗಾಲಾಗಿದೆ.ಆ ಕುರಿತು ಈಗಾಗಲೇ FSL ವರದಿ ಕೂಡ ಬಂದಿದೆ.ವರದಿ ಬಂದರೂ ಕೂಡ ಕ್ರಮ ತೆಗೆದುಕೊಂಡಿಲ್ಲ. ಡಿಸಿಎಂ ದೃಷ್ಟಿಯಲ್ಲಿ ಅವರು ಅಮಾಯಕರು, ಬ್ರದರ್ಸ್ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ದಕ್ಷವಾಗಿ ಇರಬೇಕು ತಕ್ಷಣ ಆರೋಪಿಗಳನ್ನು ಬಂಧಿಸಬೇಕು ರಾಜ್ಯದಲ್ಲಿ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಜನ ಹೇಳುತ್ತಿದ್ದಾರೆ ರಾಮೇಶ್ವರಂ ಬ್ಲಾಸ್ಟ್ ವಿಚಾರ ಕ್ರಮ ತಗೋಳೋಕೆ ಇವರಿಗೆ ಆಗ್ತಾ ಇಲ್ಲ

ಗ್ಯಾರಂಟಿ ಯೋಜನೆ ಕುರಿತು ಪ್ರತಿಕ್ರಿಯೆಸಿದ ಅವರು,ಸರ್ಕಾರದ ಹಂತದಲ್ಲಿ ಗ್ಯಾರಂಟಿ ಯೋಜನೆ ಸಮಾವೇಶ ಮಾಡ್ತಾರೆ, ಜಾಹಿರಾತು ಕೊಡ್ತಾರೆ ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಬೀಳಲಿದೆ ರಾಜ್ಯದಲ್ಲಿ ನಾವು 28 ಸಿಟ್ ಗೆಲ್ಲುತ್ತೇವೆ, 400ಕ್ಕು ಅಧಿಕ ಸ್ಥಾನ ದೇಶದಲ್ಲಿ ಗೆಲ್ಲುತ್ತೇವೆ ಶಾಸಕರಿಗೆ 50 ಕೋಟಿ ಹಣದ ಆಮಿಷ ವಿಚಾರ ಸಿದ್ದು ಆರೋಪ ಸಿದ್ದು ಕೈನಲ್ಲಿ ಪೊಲೀಸ್ ಇದೆ ಅಧಿಕಾರ ಇದೆ ಈ ಕುರಿತು ತನಿಖೆ ಮಾಡಿಸಬೇಕಿದೆ ಎಂದರು.

ಗಾಳಿಯಲ್ಲಿ ಗುಂಡು ಹೊಡೆಯಬೇಡಿ

ಗಾಳಿಯಲ್ಲಿ ಗುಂಡು ಹೊಡೆಯಬೇಡಿ ಎಂದು ಸಿದ್ದುಗೆ ಕೌಂಟರ್ ನೀಡಿದ್ದರು. ನಾವು 50ಕೋಟಿ ಕೊಡೋದಿಲ್ಲ, ಆಪರೇಷನ್ ಕಮಲ ಮಾಡೋದಿಲ್ಲ ಆದ್ರೂ ನಿಮ್ಮ ಸರ್ಕಾರ ಬಿದ್ಧೆ ಬೀಳಲಿದೆ.

ದಾವಣಗೆರೆಯಿಂದ ಟಿಕೆಟ್ ಬೇಡಿಕೆ ವಿಚಾರವಾಗಿಬ ಮಾತನಾಡಿದ ಅವರು,ನಾವು ನಮ್ಮ ಪಕ್ಷದ ಎಲ್ಲ ಹಿರಿಯ ಅಧಿಕಾರಿಗಳನ್ನು ಭೇಟೆಯಾಗಿದ್ದೇವೆ ನಾವು ನಾಲ್ಕು ಜನ ಆಕಾಂಕ್ಷಿಗಳ ಬಗ್ಗೆ ತಿಳಿಸಿದ್ದೇವೆ ವೀಕ್ಷಕರ ಬಳಿ ಹೊಸಬರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೇವೆ ನಾವು ಬಿಜೆಪಿ ನಾಯಕರ ಮನೆಯಲ್ಲಿ ಸೇರಿ ಚರ್ಚೆ ಮಾಡಿದ್ದೇವೆ ನಮ್ಮದು ಬಂಡಾಯ ಸಭೆ ಅಲ್ಲ, ಪಕ್ಷದ ಸಭೆ ನಮ್ಮ ಕಾರ್ಯಕರ್ತರ ಅಭಿಪ್ರಾಯ ಹೇಳಿದ್ದೇವೆ.

ನಾವು ಅವಕಾಶ ಕೊಡಿ ಎಂದು ಕೇಳಿದ್ದು ಸತ್ಯ ಅದನ್ನು ಮುಚ್ಚಿ ಇಡಲು ಆಗುವುದಿಲ್ಲ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES