Friday, May 17, 2024

ತೂಫಾನ್ ಬ್ಯಾಟಿಂಗ್.. 62 ಎಸೆತಗಳಲ್ಲಿ 135 ರನ್ ಚಚ್ಚಿದ ಮೈಕಲ್

ಬೆಂಗಳೂರು : ನಮೀಬಿಯಾ ಹಾಗೂ ನೆದರ್ಲೆಂಡ್ಸ್​ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ 20 ವರ್ಷದ ಯುವ ಬ್ಯಾಟರ್ ಚರಿತ್ರೆ ಸೃಷ್ಟಿಯಾಗಿದೆ.

ನೆದರ್ಲೆಂಡ್ಸ್​ ಕ್ರಿಕೆಟಿಗ ಮೈಕಲ್ ಲೆವಿಟ್ (135) ತೂಫಾನ್​ ಬ್ಯಾಟಿಂಗ್ ನಡೆಸಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ನೆದರ್ಲೆಂಡ್ಸ್​ ತಂಡದ ಪರ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ನಮೀಬಿಯಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಮೈಕಲ್ ಲೆವಿಟ್ 62 ಎಸೆತಗಳಲ್ಲಿ 135 ರನ್​ ಬಾರಿಸುವ ಮೂಲಕ ನಮೀಬಿಯಾ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ್ದಾರೆ. ಇದರಲ್ಲಿ 11 ಬೌಂಡರಿ ಹಾಗೂ 10 ಸಿಕ್ಸರ್​ಗಳು ಸೇರಿವೆ. ಈ ಪಂದ್ಯದಲ್ಲಿ ನೆದರ್ಲೆಂಡ್ಸ್ 59 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಗೆಲುವಿನ ರೂವಾರಿ ಮೈಕಲ್ ಲೆವಿಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೊದಲೆರಡು ಪಂದ್ಯದಲ್ಲಿ 50, 3ನೇ ಪಂದ್ಯದಲ್ಲಿ ಶತಕ

ಪ್ರಸಕ್ತ ಟಿ-20 ಸರಣಿಯಲ್ಲಿ ಮೈಕಲ್ ಲೆವಿಟ್ ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕ ಹಾಗೂ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಮೊದಲ ಟಿ-20 ಪಂದ್ಯದಲ್ಲಿ 36 ಎಸೆತಗಳಲ್ಲಿ 54 ರನ್ ಸಿಡಿಸಿದ್ದರು. ಎರಡು ಪಂದ್ಯಗಳಲ್ಲಿ 13 ಸಿಕ್ಸರ್ ಹಾಗೂ 17 ಬೌಂಡರಿಗಳೊಂದಿಗೆ 189 ರನ್​ ಗಳಿಸಿದ್ದಾರೆ.

RELATED ARTICLES

Related Articles

TRENDING ARTICLES