Sunday, May 12, 2024

ಅಯ್ಯರ್, ಇಶಾನ್​ಗೆ ಶಾಕ್ : ಬಿಸಿಸಿಐ ಗುತ್ತಿಗೆಯಿಂದ ಇಬ್ಬರೂ ಔಟ್

ಬೆಂಗಳೂರು : ಭಾರತದ ಯುವ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ.

ಪ್ರಸ್ತುತ ಪ್ರಕಟಿಸಲಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೇಂದ್ರ ಗುತ್ತಿಗೆಯಿಂದ ಇಶಾನ್ ಕಿಶನ್ ಮತ್ತು ಶ್ರೇಯಸ್‌ ಅಯ್ಯರ್ ಅವರನ್ನು ಕೈಬಿಡಲಾಗಿದೆ. ದೀಪಕ್ ಚಹಾರ್ ಹಾಗೂ ಚಹಾಲ್​ ಅವರಿಗೂ ಆಘಾತ ಎದುರಾಗಿದೆ.

ರಣಜಿ ಟ್ರೋಫಿಯಲ್ಲಿ ತಮ್ಮ ತವರು ರಾಜ್ಯದ ತಂಡದಲ್ಲಿ ಆಡಲು ಇಶಾನ್ ಮತ್ತು ಶ್ರೇಯಸ್‌ ಅವರಿಗೆ ಸೂಚಿಸಲಾಗಿತ್ತು. ಆದರೆ, ಇಬ್ಬರೂ ಅದನ್ನು ಪಾಲಿಸದೇ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಸಿಸಿಐ ಆದೇಶದ ಹೊರತಾಗಿಯೂ ದೇಶಿಯ ಕ್ರಿಕೆಟ್​ನಲ್ಲಿ ಆಡದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

2023-24 ಸಾಲಿನ ಕೇಂದ್ರೀಯ ಒಪ್ಪಂದ ಹೊಂದಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಎ+ ಗ್ರೇಡ್​ನಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಸ್ಥಾನ ಪಡೆದಿದ್ದಾರೆ.

, ಬಿ ಗ್ರೇಡ್​ ಆಟಗಾರರು

ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್. ರಾಹುಲ್, ಶುಭ್​ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಎ ಗ್ರೇಡ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸೂರ್ಯಕುಮಾ‌ರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್‌ ಬಿ ಗ್ರೇಡ್​ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಸಿ ಗ್ರೇಡ್​ನಲ್ಲಿ 15 ಆಟಗಾರರು

ಸಿ ಗ್ರೇಡ್​ನಲ್ಲಿ 15 ಆಟಗಾರರು ಅವಕಾಶ ಪಡೆದಿದ್ದಾರೆ. ಯುವ ಆಟಗಾರರಾದ ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಟೋಯಿ, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್. ಭರತ್, ಪ್ರಸಿದ್ಧ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟೀದಾ‌ರ್ ಇದ್ದಾರೆ.

RELATED ARTICLES

Related Articles

TRENDING ARTICLES