Monday, May 13, 2024

ಜೂನ್​ನಿಂದ ಬಿಜೆಪಿ ಸರ್ಕಾರದ ಮೂರನೇ ಅವಧಿ ಆರಂಭ : ಪ್ರಧಾನಿ ಮೋದಿ

ನವದೆಹಲಿ : ಜೂನ್​ ತಿಂಗಳಿಂದ ದೇಶದಲ್ಲಿ ಬಿಜೆಪಿ ಸರ್ಕಾರದ ಮೂರನೇ ಅವಧಿ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ವಿಕಸಿತ ಭಾರತ’ ಅಡಿಯಲ್ಲಿ 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಆಧುನಿಕ ಭಾರತವನ್ನು ಕಾಣುತ್ತಿದ್ದೇವೆ. ಮೂಮದಿನ ದಿನಗಳಲ್ಲಿ ನಡೆಯುವ ಕಾಮಗಾರಿಯ ಪ್ರಾಮಾಣಿಕತೆ ಮತ್ತು ವೇಗ ಕಂಡು ಜನ ಅಚ್ಚರಿ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಜವಳಿ ಮಾರುಕಟ್ಟೆಯ ಮೌಲ್ಯ 12 ಲಕ್ಷ ಕೋಟಿ

2014 ರಲ್ಲಿ ಭಾರತದ ಜವಳಿ ಮಾರುಕಟ್ಟೆಯ ಮೌಲ್ಯ 7 ಲಕ್ಷ ಕೋಟಿ ರೂಪಾಯಿಗಳಿಗೂ ಕಡಿಮೆ ಇತ್ತು. ಇಂದು, ಅದು 12 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. 10 ವರ್ಷದ ಅವಧಿಯಲ್ಲಿ ಭಾರತದ  ನೂಲು, ಉಡುಪು ಮತ್ತು ದಿರಿಸುಗಳ ಉತ್ಪಾದನೆ ಶೇ.25 ರಷ್ಟು ವೃದ್ಧಿಯನ್ನು ಕಂಡಿದೆ ಎಂದು ತಿಳಿಸಿದ್ದಾರೆ.

10 ವರ್ಷಗಳಿಂದ ನವ ಭಾರತ ನೋಡುತ್ತಿದ್ದೇವೆ

ಕಳೆದ ಹತ್ತು ವರ್ಷಗಳಿಂದ ನಾವು ನವ ಭಾರತವನ್ನು ನೋಡುತ್ತಿದ್ದೇವೆ. ರೈಲ್ವೆ ಇಲಾಖೆಯಲ್ಲಂತೂ ಅಭೂತಪೂರ್ವ ಅಭಿವೃದ್ಧಿ ಕೆಲಸಗಳಾಗಿವೆ‌. ವಿಮಾನ ನಿಲ್ದಾಣಗಳ ಸೇವೆ ಈಗ ರೈಲ್ವೆ ನಿಲ್ದಾಣಗಳಲ್ಲಿಯೂ ಲಭ್ಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES