Sunday, September 8, 2024

Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​ ; 3 ನಿಮಿಷಕ್ಕೊಂದು ರೈಲು

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್​ ನ್ಯೂಸ್​ವೊಂದು ನೀಡಿದೆ.

ಹೌದು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಡಿವಾಣವಾಗಲು ಇಂದಿನಿಂದ  ನೇರಳೆ ಮಾರ್ಗದಲ್ಲಿ ಪೀಕ್‌ ಅವರ್‌ನಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ರೈಲು ಓಡಾಟ ಆರಂಭಿಸಿಲು ನಿರ್ಧಾರಿಸಿದೆ.

ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರ ದಟ್ಟಣೆ ವಿಪರೀತ

ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ ಕಾಡುಗೋಡಿವರೆಗೆ ಓಡುವ ನೇರಳೆ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರ ದಟ್ಟಣೆ ವಿಪರೀತವಾಗಿದೆ. ಮೆಟ್ರೋ ರೈಲಿಗಾಗಿ ತುಂಬ ಹೊತ್ತು ಕಾಯುವ ಪರಿಸ್ಥಿತಿ ಇದೆ.

ರೈಲು ಹತ್ತಲು ದೊಡ್ಡ ಸಾಲುಗಳು ಕಂಡುಬರುತ್ತಿದ್ದು, ಒಂದೆರಡು ರೈಲು ಬಿಟ್ಟು ಮೂರನೇ ರೈಲು ಹಿಡಿಯಬೇಕಾದ ಸ್ಥಿತಿ ಇದೆ.‌ ಅದರಲ್ಲೂ ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಂತೂ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಂಥ ವಾತಾವರಣ ಕಂಡುಬರುತ್ತಿದೆ. ಇಂಥ ‌ ಪರಿಸ್ಥಿತಿಯಿಂದ ಮುಕ್ತಿ ನೀಡಲು ನಮ್ಮ ಮೆಟ್ರೋ ಇಂದಿನಿಂದ ಬೆಳಗ್ಗಿನ ಹೊತ್ತು ಪ್ರತಿ ಮೂರು ನಿಮಿಷಕ್ಕೊಂದು ರೈಲು ಓಡಾಟ ಆರಂಭ ಮಾಡಿದೆ.

ಇನ್ನು ಸಂಜೆಯ ಹೊತ್ತು ಕೂಡಾ ಮೂರು ನಿಮಿಷಕ್ಕೊಂದು ರೈಲು ಓಡಾಡಲಿದೆ. ಇದುವರೆಗೆ ಬೆಳಗ್ಗೆ 8ರಿಂದ 11ರವರೆಗೆ ಐದು ನಿಮಿಷಕ್ಕೊಂದು ರೈಲು ಓಡುತ್ತಿತ್ತು.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಪೀಕ್ ಹವರ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ಹೆಚ್ಚುವರಿ ರೈಲು ಓಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದೆ.

ಎರಡು ಹಾಲಿ ಮಾರ್ಗಗಳ ಪೈಕಿ ನೇರಳೆ ಮಾರ್ಗದಲ್ಲಿ ಪೀಕ್‌ ಅವರ್‌ನಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ಮೆಟ್ರೋ ಸಂಚಾರವಾಗುತ್ತದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲು ಸಂಚಾರದ ಸಮಯದ ಮಾಹಿತಿ ಇಲ್ಲಿದೆ

ನೇರಳೆ ಮಾರ್ಗ ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದಿಂದ ಗುರಡಾಚಾರಪಾಳ್ಯ ನಿಲ್ದಾಣದವರೆಗೆ ಬೆಳಗ್ಗೆ 8.45 ಗಂಟೆಯಿಂದ 10.20 (95 ನಿಮಿಷ) ಪ್ರತಿ ಮೂರು ನಿಮಿಷಕ್ಕೆ ಒಂದು ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಈ ಮೂಲಕ ಮಾರ್ಗ ಬದಲಾವಣೆಯ ಜಂಕ್ಷನ್ ಆಗಿರುವ ಮೆಜೆಸ್ಟಿಕ್ ನಿಲ್ದಾಣಕ್ಕೆ ಬರುವ ಸಹಸ್ರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

 

ಇದೇ ನೇರಳೆ ಮಾರ್ಗದ ನಿಲ್ದಾಣಗಳಾದ ಟ್ರಿನಿಟಿ, ಎಂಜಿ ರಸ್ತೆ, ಇಂದಿರಾನಗರ, ಬೆನ್ನಿಗಾನಹಳ್ಳಿ, ಕೃಷ್ಣರಾಜ ಪುರ (ಕೆಆರ್‌ ಪುರ) ಹಾಗೂ ಗರುಡಾಚಾರಪಾಳ್ಯ ನಿಲ್ದಾಣದ ಕಡೆಗೆ ಹೋಗುವ ಮೆಟ್ರೋ ಪ್ರಯಾಣಿಕರ ಅಗತ್ಯತೆ ನೋಡಿಕೊಂಡು ಹೆಚ್ಚುವರಿ ಮೆಟ್ರೋ ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

Related Articles

TRENDING ARTICLES