Friday, May 17, 2024

ಪ್ಯಾರಾ ಕ್ರಿಕೆಟಿಗ ಅಮೀರ್​ಗೆ ಬ್ಯಾಟ್​​ ಗಿಫ್ಟ್ ನೀಡಿದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​

ಜಮ್ಮು ಕಾಶ್ಮೀರ: ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ಯಾರಾ ಕ್ರಿಕೆಟಿಗ ಅಮೀರ್​​ನನ್ನು ಭೇಟಿ ಮಾಡಿ ಬ್ಯಾಟ್​​ ಉಡುಗೊರೆಯಾಗಿ ನೀಡಿದ್ದಾರೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರನ್ನು ಭೇಟಿ ಮಾಡುವ ಮೂಲಕ ಅಮೀರ್​ ಆಸೆಯನ್ನು ಈಡೇರಿಸಿದ ಸಚಿನ್, ಅಮೀರ್ ಹುಸೇನ್ ಜೊತೆ  ಹೃದಯಸ್ಪರ್ಶಿ ಸಂಭಾಷಣೆ ನಡೆಸಿದ್ದಾರೆ.

ಇದನ್ನೂ ಓದಿ: ಪೊಲೀಸ್​ ನೇಮಕಾತಿ ಪರೀಕ್ಷೆ ರದ್ದು ಪಡಿಸಿದ ಯೋಗಿ ಆದಿತ್ಯನಾಥ್​

ಅಮೀರು ಹುಸೇನ್​  8ನೇ ವಯಸ್ಸಿನವನಾಗಿದ್ದಾಗ ಸಂಭವಿಸಿದ ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ, ಬಳಿಕ ರಾಜ್ಯದ ಪ್ಯಾರಾ ಕ್ರಿಕೆಟ್ ತಂಡದ ಪರ ಆಡಲು ಸಾಕಷ್ಟು ಶ್ರಮವಹಿಸಿ ತಮ್ಮ ಪಾದಗಳಿಂದ ಬೌಲಿಂಗ್ ಮತ್ತು ತಮ್ಮ ಕುತ್ತಿಗೆ ಮತ್ತು ಭುಜವನ್ನು ಬಳಸಿ ಬ್ಯಾಟ್ ಮಾಡುವ ಮೂಲಕ ಅನೇಕ ಸವಾಲುಗಳನ್ನು ಎದುರಿಸಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಭಾರತದ ಪ್ಯಾರ ಕ್ರಿಕೆಟ್​ ನಾಯಕನಾಗುವ ಮೂಲಕ ಗಮನ ಸೆಳೆದಿದ್ದಾರೆ.

ಅಮೀರ್​ ರ ವಿಶಿಷ್ಟ ಆಟದ ಶೈಲಿ ಮತ್ತು ಆತನ ಹಿನ್ನೆಲೆ ತಿಳಿದ ಸಚಿನ್ ಮೆಚ್ಚುಗೆಯನ್ನು ಸೂಚಿಸಿದ್ದು ಇದೀಗ ಅಮೀರ್​ ಇಚ್ಚೆಯಂತೆ ಕಾಶ್ಮೀರಕ್ಕೆ ತೆರಳಿ ಆತನನ್ನು ಭೇಟಿ ಮಾಡಿ ಬಳಿಕ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES