Wednesday, May 8, 2024

ಪೊಲೀಸ್​ ನೇಮಕಾತಿ ಪರೀಕ್ಷೆ ರದ್ದು ಪಡಿಸಿದ ಯೋಗಿ ಆದಿತ್ಯನಾಥ್​!

ಉತ್ತರ ಪ್ರದೇಶ : ಯುಪಿ ಪೊಲೀಸ್ ನೇಮಕಾತಿ ಪರೀಕ್ಷೆಯ ಪೇಪರ್ ಸೋರಿಕೆಯಾದ ಘಟನೆಯ ನಂತರ ಯೋಗಿ ಆದಿತ್ಯನಾಥ್ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಪರೀಕ್ಷೆಯನ್ನೇ ರದ್ದುಗೊಳಿಸುವುದಾಗಿ ಘೋಷಿಸಿದೆ.

ಪರೀಕ್ಷೆ ರದ್ದಾದ ಹಿನ್ನೆಲೆ 6 ತಿಂಗಳೊಳಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದು, ಯುವಕರ ಪರಿಶ್ರಮ ಹಾಗೂ ಪರೀಕ್ಷೆಯ ಪಾವಿತ್ರ್ಯತೆಯೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ನವರು ಜಾತ್ಯತೀತರಾಗಿದ್ದರೆ ಮಸೀದಿ-ಚರ್ಚ್ ಹಣಕ್ಕೂ ಕೈಹಾಕುತ್ತಿದ್ದರು: ಸಿ.ಟಿ ರವಿ

ಪೇಪರ್ ಸೋರಿಕೆ ಮಾಡಿದವರು ಎಸ್‌ಟಿಎಫ್‌ನ ರಾಡಾರ್‌ನಲ್ಲಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ಅನೇಕ ಮಂದಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪ್ರಕರಣದ ಪತ್ರಿಕೆ ಸೋರಿಕೆ ವಿಚಾರವಾಗಿ ಆಂತರಿಕ ತನಿಖೆಗಾಗಿ ನೇಮಕಾತಿ ಮಂಡಳಿಯು ತನಿಖಾ ಸಮಿತಿಯನ್ನು ರಚಿಸಿದೆ. ಎಡಿಜಿ ಶ್ರೇಣಿಯ ಅಧಿಕಾರಿ ಈ ವಿಚಾರಣಾ ಸಮಿತಿಯ ನೇತೃತ್ವ ವಹಿಸಿದ್ದು, ಇದುವರೆಗೆ ಸುಮಾರು 1500 ದೂರುಗಳನ್ನು ಅಭ್ಯರ್ಥಿಗಳು ಇ-ಮೇಲ್ ಮೂಲಕ ನೇಮಕಾತಿ ಮಂಡಳಿಗೆ ಕಳುಹಿಸಿದ್ದಾರೆ.

RELATED ARTICLES

Related Articles

TRENDING ARTICLES