Wednesday, January 22, 2025

ದಿನ ಭವಿಷ್ಯ: ಈ ರಾಶಿಯವರ ವ್ಯಕ್ತಿತ್ವಕ್ಕೆ ಮಿತ್ರರಿಂದ ಶ್ಲಾಘನೆ

ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ವ್ಯವಹಾರದಲ್ಲಿ ಚಿಂತೆ ಮತ್ತು ನಷ್ಟ, ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಅಪವಾದ ಅಪನಿಂದನೆ.

ವೃಷಭ: ಆತುರ, ಮುಂಗೋಪ, ಅನಗತ್ಯ ಖರ್ಚು, ದುಃಸಪ್ನಗಳು, ಆರ್ಥಿಕವಾಗಿ ಸ್ವಲ್ಪ ಚೇತರಿಕೆ, ಉದ್ಯೋಗದಲ್ಲಿ ನಷ್ಟ.

ಮಿಥುನ: ಮಕ್ಕಳಿಂದ ಲಾಭ, ಮಿತ್ರರಿಂದ ಸಹಕಾರ, ಲಾಭ ಮತ್ತು ನಷ್ಟ ಸಮ ಪ್ರಮಾಣ, ಸಾಲ ತೀರಿಸುವ ಅವಕಾಶ, ಆರೋಗ್ಯದಲ್ಲಿ ಚೇತರಿಕೆ.

ಕಟಕ: ಸ್ಥಿರಾಸ್ತಿ ವಿಷಯದಲ್ಲಿ ಸಮಸ್ಯೆ, ಮಾನಸಿಕ ಸಂಕಟ, ಬೇಸರ, ಮಾಟ ಮಂತ್ರ ತಂತ್ರದ ಆತಂಕ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ

ಸಿಂಹ : ಅನಿರೀಕ್ಷಿತ ಖರ್ಚು, ಸ್ತ್ರೀಯರಿಂದ ಅಪವಾದ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಂದ ಯೋಗ ಫಲ.

ಕನ್ಯಾ: ಆರ್ಥಿಕ ಅಡೆತಡೆಗಳು, ಮಕ್ಕಳ ಭವಿಷ್ಯದ ಚಿಂತೆ, ಕೌಟುಂಬಿಕ ಚಿಂತೆ, ಅಪವಾದಗಳು, ಅನಗತ್ಯ ತಿರುಗಾಟ.

ತುಲಾ: ಸೋಮಾರಿತನ, ಆಲಸ್ಯ, ಉಡಾಫೆ, ಆರೋಗ್ಯದಲ್ಲಿ ವ್ಯತ್ಯಾಸ, ಕೌಟುಂಬಿಕ ಕಲಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ವೃಶ್ಚಿಕ: ಸಾಲದ ಚಿಂತೆ, ಪಾಲುದಾರಿಕೆಯಲ್ಲಿ ನಷ್ಟ, ಅವಕಾಶ ಕೈ ತಪ್ಪುವುದು, ಉದ್ಯೋಗ ಲಾಭ, ಪರಿಹಾರ ಹಸುವಿಗೆ ಬೆಲ್ಲ ತಿನ್ನಿಸಿ.

ಧನಸ್ಸು: ಮಕ್ಕಳಿಂದ ಲಾಭ, ಸಾಲ ಮಾಡುವ ಯೋಚನೆ, ಕೌಟುಂಬಿಕ ಸಮಸ್ಯೆ, ತಂದೆಯಿಂದ ಸಹಕಾರ.

ಮಕರ: ಉದ್ಯೋಗದಲ್ಲಿ ಎಳೆದಾಟ, ಮಕ್ಕಳಿಂದ ಲಾಭ, ಗೃಹ ನಿರ್ಮಾಣಕ್ಕೆ ಅನುಕೂಲಕರ, ಗೌರವಕ್ಕೆ ಧಕ್ಕೆ.

ಕುಂಭ: ಪ್ರಯಾಣದಲ್ಲಿ ಎಚ್ಚರಿಕೆ, ವ್ಯಾಮೋಹಕ್ಕೆ ಬಲಿ, ಉದ್ಯೋಗದಲ್ಲಿ ಪ್ರಗತಿ, ವಸ್ತ್ರಾಭರಣ ಖರೀದಿಗೆ ಉತ್ತಮ.

ಮೀನ: ಆಯುಷ್ಯದ ಚಿಂತೆ, ಕಿರಿಕಿರಿ, ಕಲಹಗಳು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ನೆರೆಹೊರೆಯವರೊಂದಿಗೆ ಮನ:ಸ್ತಾಪ.

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಶನಿವಾರ

ತಿಥಿ : ಹುಣ್ಣಿಮೆ ತಿಥಿಯು ಹಗಲು 04.54 ರವರೆಗು ಇದ್ದು ಆನಂತರ ಪಾಡ್ಯ ಆರಂಭವಾಗುತ್ತದೆ.

ನಕ್ಷತ್ರ : ಮಖೆ ನಕ್ಷತ್ರವು ರಾ.09.30 ವರೆಗು ಇರುತ್ತದೆ. ಆನಂತರ ಪುಬ್ಬ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.39

ಸೂರ್ಯಾಸ್ತ: ಸ.06.26

ರಾಹುಕಾಲ : ಬೆ.09.00 ರಿಂದ ಬೆ.10.30

RELATED ARTICLES

Related Articles

TRENDING ARTICLES