ದಿನ ನಿತ್ಯದ ಜಂಜಾಟಗಳ ಬದುಕಿನಲ್ಲಿ ಒತ್ತಡ, ಆಲೋಚನೆಗಳು, ಮಾನಸಿಕ ನೆಮ್ಮದಿ ಕೆಡಿಸುವ ಸಂಗತಿಗಳಿಂದಾಗಿ ನಾವು ಮಾನಸಿಕ ಖಿನ್ನತೆಗೆ ಒಳಪಡಿತ್ತೇವೆ. ಇದರಿಂದ ನಾವು ಮಾನಸಿಕ ಅಸ್ವಸ್ಥತೆಗೂ ಗುರಿಯಾಗಬಹುದು. ಇದರಿಂದ ನಾವು ಬಚಾವ್ ಆಗಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ..
ಮಾನಸಿಕ ಆರೋಗ್ಯಕ್ಕೆ ಕೆಲವು ಟಿಪ್ಸ್ಗಳು ಹೀಗಿವೆ
- ನಿಮ್ಮ ಜೀವನಶೈಲಿಯನ್ನು ಉತ್ತಮವಾಗಿರಿಸಿ. ನಿಮಗಾಗಿ ನೀವು ಮೊದಲು ಸಮಯ ಕೊಡಿ.
- ನಿಮ್ಮ ಕೆಲಸಗಳ ಬಗ್ಗೆ ಸರಿ-ತಪ್ಪುಗಳ ಸ್ವಯಂ ವಿಮರ್ಶೆ ಮಾಡಿ. ನಿಮ್ಮಿಷ್ಟದ ವಿಷಯಗಳತ್ತ ಹೆಚ್ಚು ಗಮನಹರಿಸಿ.
- ನಿಮಗೆ ಸಂತಸ ಕೊಡುವ ಕೆಲಸಗಳನ್ನು ಮಾಡುತ್ತಾ ಹೋಗಿ ನಿಮ್ಮ ಮನಸ್ಸು ಹಗುರವಾಗುತ್ತದೆ.
- ನಿಮ್ಮ ಹವ್ಯಾಸ ಮತ್ತು ಯೋಜನೆಗಳು ಯಾವಗಲೂ ಉತ್ತಮವಾಗಿರಲಿ.
- ನಿಮ್ಮ ನೆಚ್ಚಿನ ಹವ್ಯಾಸಗಳನ್ನು ದಿನವೂ ಮಾಡಿ
- ಫೋನ್ ಬದಲು ಪುಸ್ತಕ ಓದಿ. ನಿಮ್ಮಿಷ್ಟದ ಸ್ಥಳಗಳಿಗೆ ಸುತ್ತಾಡಿ.
- ನಿಮ್ಮ ಬಿಡುವಿನ ವೇಳೆಯಲ್ಲಿ ಹಾಡು, ಆಟ, ನೃತ್ಯ, ಪೇಂಟಿಂಗ್ ಹೀಗೆ ಹಲವು ಹವ್ಯಾಸಗಳಲ್ಲಿ ಮಾಡುವುದನ್ನೂ ರೂಢಿ ಮಾಡಿಕೊಳ್ಳಿ.
- ಮಾನಸಿಕ ಆರೋಗ್ಯಕ್ಕೆ ಹಾಗೂ ದೈಹಿಕ ಆರೋಗ್ಯ ಎರಡು ಮುಖ್ಯ.ಇದಕ್ಕಾಗಿ ರಾತ್ರಿ ಆಳವಾದ ನಿದ್ದೆ, ಉತ್ತಮ ಊಟ, ಹೆಚ್ಚು ನೀರು ಕುಡಿಯುವುದು ಉತ್ತಮ
- ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡಿ
- ಹೆಚ್ಚು ಹಣ್ಣುಗಳು, ಹಸಿರು ಸೊಪ್ಪು ಮತ್ತು ತರಕಾರಿಗಳನ್ನೂ ಸೇವಿಸಿ.
- ಒತ್ತಡ ನಿಭಾಯಿಸುವುದನ್ನು ಕಲಿಯಿರಿ
- ಒಳ್ಳೆಯ ಜನರೊಂದಿಗೆ ಸಂಪರ್ಕ ಹೊಂದಿರಿ
ಈ ಮೇಲಿನ ಟಿಪ್ಸ್ಅನ್ನು ನೀವು ಅನುಸರಿಸಿವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.