ಮಂಡ್ಯ : ಮಂಡ್ಯ ಕಾಂಗ್ರೆಸ್ ಎಂಪಿ ಅಭ್ಯರ್ಥಿ ಫೈನಲ್ ಆಗಿದೆ. ಪಾರ್ಟಿ ಘೋಷಣೆ ಮಾಡೋದು, ನಾನು ಮಾಡೋಕೆ ಆಗಲ್ಲಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರಿಗೂ ಕರೆ ಮಾಡಿಲ್ಲ. ಅವಶ್ಯಕತೆ ಬಂದಾಗ ಮಾಡ್ತಿನಿ ಎಂದು ತಿಳಿಸಿದರು.
ನಾಟಿ ಎನ್ನುವುದನ್ನು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂಬ ಸಂಸದೆ ಸುಮಲತಾ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಅವರಷ್ಟು ಬುದ್ದಿವಂತರಲ್ಲ. ನನ್ನ ಮಣ್ಣಿನ ಒಬ್ಬ ಅಭ್ಯರ್ಥಿಯನ್ನು ಹಾಕ್ತೇನೆ ಅಂತ ಹೇಳಿದ್ದೆ. ಅವರು ಏನು ಬೇಕಾದರೂ ವಿವರಣೆ ಕೊಡಲಿ, ನನಗೆ ಬೇಜಾರಿಲ್ಲ ಎಂದು ಕುಟುಕಿದರು.
8 ತಾಲೂಕಿನ ಜನ ತೀರ್ಮಾನ ಮಾಡಬೇಕು
ಅವರು ಒಬ್ಬ ಸಂಸದರಾಗಿದ್ದಾರೆ. ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್ಗೆ ಫೈಟ್ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಯಾರು ಯಾವುದಕ್ಕೆ ಸೂಟ್ ಆಗುತ್ತಾರೆ ಎನ್ನುವುದನ್ನು ಜನ ತೀರ್ಮಾನ ಮಾಡ್ತಾರೆ. ನಾನು, ಸುಮಲತಾ, ಕುಮಾರಸ್ವಾಮಿ ಅವರು ಒಂದು ಹೆಸರು ಬರೆದು ಅಭ್ಯರ್ಥಿ ಘೋಷಣೆ ಮಾಡುವ ಕಾಲವಲ್ಲ. ಇದು ಪ್ರಜಾಪ್ರಭುತ್ವ, ಜಿಲ್ಲೆಯ 8 ತಾಲೂಕಿನ ಜನ ತೀರ್ಮಾನ ಮಾಡಬೇಕು. ಅವರವರ ಅಭಿಪ್ರಾಯ ತಿಳಿಸಲಿ. ಪಾರ್ಲಿಮೆಂಟ್ನಲ್ಲಿ ಯಾರು ಯಾರು ಸ್ಟ್ರಾಂಗ್ ಆಗಿ ಇದ್ದಾರೆ ಅಂತ ಇತಿಹಾಸ ಗೊತ್ತಿದೆ ಎಂದು ಹೇಳಿದರು.
ನಾವು ಈಗಾಗಲೇ ಬಲಿಷ್ಟವಾಗಿದ್ದೇವೆ
ಮಂಡ್ಯ ಟಿಕೆಟ್ಗಾಗಿ ಬಿಜೆಪಿ ಹಾಗೂ ಜೆಡಿಎಸ್ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೇರೆಯವರ ವಿಕ್ನೆಸ್ ನೋಡಿ ಬಲಿಷ್ಠವಾಗಲ್ಲ, ನಾವು ಈಗಾಗಲೇ ಬಲಿಷ್ಟವಾಗಿದ್ದೇವೆ. ಅವರು ಯಾರನ್ನಾದರೂ ಅಭ್ಯರ್ಥಿ ಹಾಕಿಕೊಳ್ಳಲಿ. ಅವರು ಹೇಗಾದರೂ ಕಿತ್ತಾಡಿಕೊಳ್ಳಲಿ ನಮಗೆ ಸಂಬಂಧವಿಲ್ಲ. ಅವರು ಹೊಂದಾಣಿಕೆ ಆಗ್ತಾರೊ, ಬಿಡ್ತಾರೋ. ಟಿಕೆಟ್ನ ಬಿಜೆಪಿಗೆ ಅಥವಾ ಜೆಡಿಎಸ್ಗೆ ಬಿಟ್ಟು ಕೊಡ್ತಾರೋ ಅವರ ಪಕ್ಷಕ್ಕೆ ಬಿಟ್ಟಿದ್ದು. ಅವರು ಫೈಟ್ ಮಾಡ್ತಾರೋ, ಇಲ್ಲ ಸ್ಟ್ರಗಲ್ ಆಗಿದಾರೋ ಗೊತ್ತಿಲ್ಲ ಎಂದು ಚಲುವರಾಯಸ್ವಾಮಿ ಚಾಟಿ ಬೀಸಿದರು.