Sunday, December 22, 2024

ತ್ರಿಷಾ ವಿರುದ್ದ ಅವಹೇಳನಾಕರಿ ಹೇಳಿಕೆ: ರಾಜು ವಿರುದ್ದ ನೋಟಿಸ್​ ಕಳಿಸಿದ ನಟಿ

ಚನ್ನೈ: ಬಹುಭಾಷಾ ನಟಿ ತ್ರಿಷಾ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳುನಾಡಿನ ರಾಜಕಾರಣಿ ಎವಿ ರಾಜು ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ಸೌತ್‌ ಇಂಡಿಯನ್‌ ಸ್ಟಾರ್ ನಟಿ ತ್ರಿಷಾ ಕೃಷ್ಣನ್‌ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಈಕೆಯ ಬಗ್ಗೆ ಈ ಹಿಂದೆ ಖಳನಟ ಮನ್ಸೂರ್‌ ಅಲಿ ಅಸಭ್ಯವಾಗಿ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ನಟಿ ತ್ರಿಷಾರನ್ನು ತಮಿಳುನಾಡಿನ ಮಾಜಿ ಎಐಎಡಿಎಂಕೆ ಪಕ್ಷದ ನಾಯಕ ಎ.ವಿ ರಾಜು ಕೆಣಕಿ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣದ ಪ್ರಕಾಶ್ ರೈ ಫಾರಂ ಹೌಸ್:5 ಎಕರೆ ರಹಸ್ಯ ಗೊತ್ತಾ..?!

ಎವಿ ರಾಜು ಸೇಲಂ ಪಶ್ಚಿಮ ಕ್ಷೇತ್ರದ ಶಾಸಕ ವೆಂಕಟಾಚಲಂ ಟೀಕಿಸುವಾಗ ನಟಿ ತ್ರಿಷಾ ಹೆಸರು ಪ್ರಸ್ತಾಪಿಸಿ ವಿವಾದದ ಹೇಳಿಕೆಯನ್ನು ನೀಡಿದ್ದರು. “ಶಾಸಕರೊಬ್ಬರು ನಟಿ ತ್ರಿಶಾ ಮೇಲೆ ಮೋಹಗೊಂಡು 25 ಲಕ್ಷ ರೂ. ಕೊಟ್ಟು ರೆಸಾರ್ಟ್‌ಗೆ ಕರೆಸಿಕೊಂಡಿದ್ದರು” ಎಂದು ತ್ರಿಷಾ ಬಗ್ಗೆ ಕೊಟ್ಟ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ  ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಬಹುಭಾಷಾ ನಟಿ ತ್ರಿಷಾ ಅಸಭ್ಯವಾಗಿ ಮಾತನಾಡಿದ್ದಕ್ಕೆ ಎಐಡಿಎಂಕೆ ಪಕ್ಷದ ಮಾಜಿ ನಾಯಕ ಎವಿ ರಾಜುನ ವಿರುದ್ಧ ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ.

 

ನಟಿ ತ್ರಿಷಾ, ರಾಜು ಅವರಿಗೆ ಕಳಿಸಿರುವ ಮಾನಹಾನಿ ನೋಟೀಸ್​ ಪ್ರತಿಯನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ನೋಟಿಸ್‌ನಲ್ಲಿ ಕೆಲವು  ಷರತ್ತುಗಳನ್ನು ಹಾಕಿದ್ದಾರೆ. ತ್ರಿಷಾ ಕಳುಹಿಸಿರುವ ನೋಟಿಸ್‌ ಪ್ರತಿಯಲ್ಲಿ ಎ ವಿ ರಾಜು ತಮ್ಮ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆಯೂ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ನಟಿ ತ್ರಿಷಾ ಎವಿ ರಾಜು ಕೊಟ್ಟಿರುವ ಹೇಳಿಕೆಗಳಿಂದ ತೀವ್ರ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆಯೂ ತಿಳಿಸಿದ್ದಾರೆ.

ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

RELATED ARTICLES

Related Articles

TRENDING ARTICLES