Wednesday, January 22, 2025

ಒಂದೇ ಹಗ್ಗಕ್ಕೆ ಕೊರಳೊಡ್ಡಿ ವೃದ್ಧ ದಂಪತಿ ಆತ್ಮಹತ್ಯೆ

ಬೆಂಗಳೂರು: ವೃದ್ಧ ದಂಪತಿ ನೇಣಿಗೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕೃಷ್ಣ ನಾಯ್ಡು (88) ಮತ್ತು ಸರೋಜಮ್ಮ (72) ಆತ್ಮಹತ್ಯೆ ಮಾಡಿಕೊಂಡ ವೃದ್ದ ದಂಪತಿ. ಬೆಳಗ್ಗೆ 5.30ರ ಸುಮಾರಿಗೆ ಸ್ಥಳೀಯರು ಬಂದು ಬಾಗಿಲು ಬಡಿದಾಗ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಕಾರಣವೇನು..?

ಬುಧವಾರ ರಾತ್ರಿ ವೃದ್ಧದಂಪತಿ ಬಟ್ಟೆಗಳಿಂದ ಮನೆಯಲ್ಲಿರೋ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿ ಮಗ ಅಶೋಕ್ ಮುಂಜಾನೆ 5.30 ಸುಮಾರಿಗೆ ಹೋಗಿ ಬಾಗಿಲು ಬಡಿದಾಗ ಬಾಗಿಲು ತಂದೆ ತಾಯಿ ತೆಗೆದಿಲ್ಲ. ಅನುಮಾನ ಬಂದು ಬಾಗಿಲು ಮುರಿದು ಒಳಗಡೆ ನೋಡಿದಾಗ ತಂದೆ- ತಾಯಿ ಇಬ್ಬರೂ ನೇಣು ಹಾಕಿಕೊಂಡಿರೋ ವಿಚಾರ ಬೆಳಕಿಗೆ ಬಂದಿದೆ.
ಇವರು ಮೂರು ಅಂತಸ್ತಿನ ಕಟ್ಟಡದಲ್ಲಿ ಮಗ ಮೊದಲ ಮಹಡಿಯಲ್ಲಿ ವಾಸವಿದ್ದು ಎರಡು ಮಹಡಿಯಲ್ಲಿರೋ ಮನೆಗಳು ಬಾಡಿಗೆ ಕೊಡಲಾಗಿದ್ದು, ಟೆರೇಸ್ ಮೇಲೆ ಸಣ್ಣ ಮನೆಯಲ್ಲಿ ವೃದ್ಧದಂಪತಿ ವಾಸವಾಗಿರುತ್ತಾರೆ.
ಸದ್ಯ ಘಟನೆ ಬಗ್ಗೆ ದಂಪತಿ ಮಗ ಅಶೋಕ್ ಅವರಿಂದ ಪೊಲೀಸರು ಹೇಳಿಕೆ ಪಡೆದಿದ್ದು, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು,ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆಸ್ತಿ ವಿಚಾರಕ್ಕೆ ವೃದ್ಧದಂಪತಿ ಹಾಗೂ ಮಗನ ನಡುವೆ ಏನಾದರೂ ವೈಷಮ್ಯ ಮನಸ್ತಾಪವಿತ್ತಾ..? ಎಂಬ ಮಾಹಿತಿ ತಿಳಿದು ಬಂದಿಲ್ಲ.

RELATED ARTICLES

Related Articles

TRENDING ARTICLES