ದೊಡ್ಡಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ತ್ರಿಪದಿ ಕವಿ ಸರ್ವಜ್ಞನ ಜಯಂತಿ ಆಚರಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ವೆಂಕಟಾಚಲಯ್ಯ ಮಾತನಾಡಿ, ಕುಂಬಾರರ ದೇವರು ಸರ್ವಜ್ಞ ಜಯಂತಿಯನ್ನು ಹಾಡೋನಹಳ್ಳಿ ಗ್ರಾಮದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಈ ಮೂಲಕವಾದರೂ ಸಮಾಜ ಸಂಘಟಿತವಾಲಿ. ಎಲ್ಲರೂ ಕವಿ ಸರ್ವಜ್ಞನ ತತ್ವ ಆದರ್ಶಗಳನ್ನು ಪಾಲಿಸಿದರೆ ಉತ್ತಮವಾಗಿ ಜೀವನ ಸಾಗಿಸಬಹುದು. ಸಮಾಜ ಏಳಿಗೆಗೆ ನಾವೆಲ್ಲ ದುಡಿಯುತ್ತಿದ್ದೇನೆ. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಇನ್ನಷ್ಟು ಸಾಧಿಸಲು ಸಾಧ್ಯವಾಗುತ್ತದೆ. ಈಗಾಗಲೇ ಸಮಾಜದ ಕಲ್ಯಾಣ ಮಂಟಪ ಶ್ರೀ ಕ್ಷೇತ್ರ ಘಾಟಿ ಯಲ್ಲಿ ನಿರ್ಮಾಣವಾಗಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಪ್ಪಯಣ್ಣ ಮಾತನಾಡಿ, ಕುಂಬಾರರ ಸಮುದಾಯ ಅತ್ಯಂತ ಕಷ್ಟದ ಜೀವನ ನಡೆಸುತ್ತಿದೆ. ಈಗೀಗ ಸಮಾಜ ಬೆಳಕಿಗೆ ಬರುತ್ತಿದೆ. ತಾರತಮ್ಯ ಮಾಡದೆ ಸವಲತ್ತು ತಲುಪಿಸಲು ಶ್ರಮಿಸುತ್ತೇನೆ. ಅಲ್ಲದೆ ಗ್ರಾಮ ಪಂಚಾಯಿತಿಯಲ್ಲಿ ಬಡ್ಡಿ ರಹಿತ ಸಾಲ ಸೌಲಭ್ಯವಿದ್ದು ಸಾಲ ಸದ್ಬಳಕೆಯಿಂದ ಆರ್ಥಿಕವಾಗಿ ಸಬಲರಾಗಬೇಕೆಂದರು.
ಇದನ್ನೂ ಓದಿ: ನಾನೂ ಶೂದ್ರ-ನೀವೂ ಶೂದ್ರರು-ರವಿಕುಮಾರ್ ಕೂಡ ಶೂದ್ರರು: ಯಾಕ್ರೀ ಇದೆಲ್ಲಾ: ಸಿಎಂ
ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರಾಜು ಮಾತನಾಡಿ, ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ ಎಂದು ೧೭ ಶತಮಾನದಲ್ಲಿಯೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಸರ್ವಜ್ಞ. ಪ್ಲಾಸ್ಟಿಕ್ ಅಬ್ಬರದಿಂದಾಗಿ ಮಣ್ಣಿನ ಮಡಿಕೆಗಳ ಪ್ರಭಾವ ಕುಂಠಿತವಾಗಿದೆ. ಹೀಗಾಗಿ ನಮ್ಮ ಕುಲಕಸುಬಿಗೆ ಪ್ರೋತ್ಸಾಹದ ಜತೆಗೆ ಮಾರಾಟ ಮಾಡಲು ಅಗತ್ಯವಾದ ಜಾಗವನ್ನು ಕಲ್ಪಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿ ಎಸ್ ಎಸ್ ಎನ್ ಅಧ್ಯಕ್ಷರಾದ ಮುನೇಗೌಡ, ಘಾಟಿ ಕುಂಬಾರ ಛತ್ರದ ಪದಾಧಿಕಾರಿ ಜಯರಾಮಯ್ಯ, ಮುಖಂಡರಾದ ಸುಬ್ರಮಣಿ, ಚೌಡಪ್ಪ, ನಂಜಪ್ಪ, ಗುಂಡಪ್ಪ ಸೇರಿದಂತೆ ಬಚ್ಚಹಳ್ಳಿ ರಾಜಣ್ಣ, ಕೃಷಮೂತಿ (ಕೋಳಿ), ಚಿನ್ನಪ್ಪ, ರಾಮಾಂಜಿನಿ, ನಾಗರಾಜಪ್ಪ, ಗಂಗಾಧರಪ್ಪ ಮತ್ತಿತರರು ಇದ್ದರು.