ಚೆನ್ನೈ: ಬಹುಭಾಷಾ ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಎಐಎಡಿಎಂಕೆ ಮಾಜಿ ಸದಸ್ಯ ಎವಿ ರಾಜು ಅವರು ವಿವಾದ ಸೃಷ್ಟಿಸಿದ್ದಾರೆ. ಈ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ.
ನಿನ್ನೆ ಸಂಜೆ ತ್ರಿಷಾ ವಿರುದ್ಧ ಎವಿ ರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೇಲಂ ಪಶ್ಚಿಮ ಶಾಸಕ ವೆಂಕಟಾಚಲಂ ಅವರಿಂದ ನಟಿ 25 ಲಕ್ಷ ರೂ.ಗಳನ್ನು ಸೆಟ್ಲ್‌ಮೆಂಟ್ ಹಣವಾಗಿ ಪಡೆದಿದ್ದಾರೆ ಎಂದು ಅವರು ಹೇಳಿದ್ದರು. ಇದಾದ ನಂತರ, ಅವರ ಹೇಳಿಕೆ ತಕ್ಷಣವೇ ಟೀಕೆಗೆ ಗುರಿಯಾಯಿತು. ಅಲ್ಲದೆ ನಟಿ ಎವಿ ರಾಜು ವಿರುದ್ಧ ಕಾನೂನು ಕ್ರಮವನ್ನೂ ತೆಗೆದುಕೊಳ್ಳುವುದಾಗಿ ಹೇಳಿದ್ದು ತ್ರಿಷಾ ಬೆಂಬಲಕ್ಕೆ ಹಲವು ತಾರೆಯರು ಕೂಡ ಸಾಥ್ ನೀಡಿದರು.
ಇದನ್ನೂ ಓದಿ: ಜಿಲ್ಲಾ ನ್ಯಾಯಾಲಯದಲ್ಲಿ ಬೆರಳಚ್ಚುಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ
ತಮಿಳುನಾಡು ಫಿಲಂ ಕೌನ್ಸಿಲ್ ಮುಖ್ಯಸ್ಥ, ನಟ ವಿಶಾಲ್ ಕೂಡ ಎವಿ ರಾಜು ಹೇಳಿಕೆಯನ್ನು ತಪ್ಪು ಎಂದು ಟೀಕಿಸಿದರು. ತ್ರಿಶಾ ಟ್ವಿಟರ್‌ನಲ್ಲಿ, ‘ಜನರ ಗಮನವನ್ನು ಸೆಳೆಯಲು ಯಾವುದೇ ಮಟ್ಟಕ್ಕೆ ಬಗ್ಗುವ ಹೀನ ಮತ್ತು ತಿರಸ್ಕಾರದ ಮನುಷ್ಯರನ್ನು ಮತ್ತೆ ಮತ್ತೆ ನೋಡುವುದು ಇನ್ನೂ ಕೆಟ್ಟದಾಗಿದೆ. ಭರವಸೆ ನೀಡಿ, ಅಗತ್ಯವಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು. ಇನ್ಮುಂದೆ ಏನು ಹೇಳಬೇಕು, ಮಾಡಬೇಕಾಗಿರುವುದು ನನ್ನ ಕಾನೂನು ವಿಭಾಗದಿಂದಲೇ ಮಾಡುತ್ತೆ ಎಂದಿದ್ದರು.