Sunday, December 22, 2024

ಮಿಸ್ಟರ್ ಮೋದಿ, ನಿಮ್ಮ ಪತ್ನಿಯನ್ನ ರಕ್ಷಣೆ ಮಾಡಿ : ಮಾಜಿ ಸಂಸದ ಉಗ್ರಪ್ಪ

ವಿಜಯನಗರ : ಮಿಸ್ಟರ್ ಮೋದಿ, ನಿಮ್ಮ ಶ್ರೀಮತಿಯವರು ಅಂಜನಾದ್ರಿಗೆ, ಹಂಪಿಗೆ ಬಂದಿದ್ದಾರೆ. ನಿಮ್ಮ ಪತ್ನಿಯನ್ನು ರಕ್ಷಣೆ ಮಾಡಿ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಚಿಕೆ ಆಗಬೇಕು ಪ್ರಧಾನಿ ಮೋದಿ. ದೇಶ ಕಂಡ ಅತ್ಯಂತ ಸುಳ್ಳುಗಾರ ಪ್ರಧಾನಿ ಅಂದ್ರೆ ಅದು ನರೇಂದ್ರ ಮೋದಿ ಎಂದು ಕಿಡಿಕಾರಿದ್ದಾರೆ.

ನರೇಂದ್ರ ಮೋದಿ ವಚನ ಭ್ರಷ್ಟ ಇದ್ದಾನೆ, 140 ಕೋಟಿ ಜನರನ್ನು ಸಾಲಗಾರರನ್ನಾಗಿ ಮಾಡಿದ್ದೇ ಸಾಧನೆ. ಸ್ಕಾಲರ್​ಶಿಪ್ ಕೊಡೋದನ್ನ ನಿಲ್ಲಿಸಿದ್ದಿರಿ. ಇದಕ್ಕೆ ನಿನಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400 ಸೀಟು ಕೊಡಬೇಕಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಇಬ್ಬರನ್ನೂ ಗುಂಡಿಟ್ಟು ಕೊಲ್ಲಬೇಕು ಎಂದಿದ್ದೆ, ಅದು ಸರಿ ಇದೆ : ಕೆ.ಎಸ್. ಈಶ್ವರಪ್ಪ ಸಮರ್ಥನೆ

ಬಿಜೆಪಿಯವರು ಸತ್ಯಹರಿಶ್ಚಂದ್ರನ ಮಕ್ಕಳು

ಬಿಜೆಪಿ ಪಕ್ಷದವರು ಸತ್ಯಹರಿಶ್ಚಂದ್ರನ ಮಕ್ಕಳಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಂತವರು RTGS ಮೂಲಕ ಹಣ ಪಡೆದಿದ್ದಾರೆ. ಏನು ಕಡೆದು ಕಟ್ಟೆ ಹಾಕಿದ್ದಾರೆ ಅಂತ 400 ಸೀಟು ಕೊಡಬೇಕು. 400 ಸೀಟು ಬರುತ್ತೆ ಅನ್ನೋದಾದ್ರೆ ಇವಿಎಂ ಹೈಜಾಕ್ ಮಾಡಬಹುದು ಎಂದು ವಿ.ಎಸ್. ಉಗ್ರಪ್ಪ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES