ಶಿವಮೊಗ್ಗ : ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎಂಬ ವಿಚಾರ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕನ್ನಡ ಸಂಸ್ಕೃತಿ ಇಲಾಖೆ ಯಾಕೆ ಈ ನಿರ್ಧಾರ ತಗೆದುಕೊಂಡಿದೆ. ಅವರು ಉತ್ತರ ಕೊಡಬೇಕಾಗುತ್ತದೆ ಎಂದು ಜಾರಿಕೊಂಡರು.
ಎಲ್ಲಾ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡುತ್ತೇವೆ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು. ಕುವೆಂಪು ಅವರ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಒಂದು ಭಾವನಾತ್ಮಕ ನೆಚರ್ ಕನೆಕ್ಟಿವಿಟಿ ಇದೆ. ನಾಡಗೀತೆ ಇದ್ದರೆ ಒಳ್ಳೆಯದು. ಅವರೊಂದಿಗೆ ಚರ್ಚೆ ಮಾಡಿ ಹೇಳುತ್ತೇನೆ ಎಂದು ತಿಳಿಸಿದರು.
ಸಂವಿಧಾನದ ಪೀಠಿಕೆ ಕಡ್ಡಾಯ ಮಾಡಲಾಗಿದೆ
ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ನಾನು ಮಾರ್ಪಾಡು ಮಾಡಿಸುತ್ತೇನೆ. ಯಾವುದಾದರೂ ಕಾರಣದಿಂದ ಹೀಗೆ ಮಾಡಿರುತ್ತಾರೆ. ನಾನು ನಮ್ಮ ಇಲಾಖೆಯಲ್ಲಿ ನಾಡಗೀತೆ ಕಡ್ಡಾಯ ಅಂತ ಮಾಡಿಸುತ್ತೇನೆ. ಇದರ ಜೊತೆಗೆ ಸಂವಿಧಾನದ ಪೀಠಿಕೆ ಕಡ್ಡಾಯ ಮಾಡಲಾಗಿದೆ. ಮಕ್ಕಳು ಅದನ್ನು ಸಹ ಓದುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.