Wednesday, January 22, 2025

ಅವನಿಗೆ ಏನು ಹೇಳಬೇಕು ಅದನ್ನ ನಾನೂ ಹೇಳ್ತೀನಿ : HDKಗೆ ಡಿಕೆಸು ತಿರುಗೇಟು

ರಾಮನಗರ : 40 ವಕೀಲರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಪ್ರಕರಣದ ಹಿಂದೆ ಸ್ಥಳೀಯ ಶಾಸಕ ಹಾಗೂ ಸಂಸದ ಡಿ.ಕೆ ಸುರೇಶ್ ಕೈವಾಡ ಎಂಬ ಮಾಜಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್  ಆರೋಪಕ್ಕೆ ಸಂಸದ ಡಿ.ಕೆ. ಸುರೇಶ್ ಕೆಂಡಾಮಂಡಲರಾಗಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ರಾಮನಗರದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಫೋನ್​​ ಟ್ಯಾಪ್​ ಮಾಡುವುದಕ್ಕೆ ಹೇಳಿ ಅವರಿಗೆ. ಏಕವಚನದಲ್ಲಿ ನನಗೂ ಮಾತನಾಡುವುದಕ್ಕೆ ಬರುತ್ತದೆ. ಅವನಿಗೆ ಯಾವಾಗ? ಏನು ಹೇಳಬೇಕು ಅದನ್ನ ನಾನೂ ಹೇಳ್ತೀನಿ ಎಂದು ಕುಮಾರಸ್ವಾಮಿಗೆ ಏಕ ವಚನದಲ್ಲೇ ಡಿ.ಕೆ. ಸುರೇಶ್ ತಿರುಗೇಟು ಕೊಟ್ಟಿದ್ದಾರೆ.

ವಕೀಲರ ವಿರುದ್ಧ ಸುಳ್ಳು ಕೇಸ್ ದಾಖಲಾಗಿದೆ

ವಕೀಲರು ನಡೆಸುತ್ತಿದ್ದ ಪ್ರತಿಭಟನೆಗೆ PSI ತನ್ವೀರ್ ಹುಸೇನ್‌ ಸಸ್ಪೆಂಡ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ನನಗೆ ಗೊತ್ತಿಲ್ಲ, ಕೋರ್ಟ್ ಆವರಣದಲ್ಲಿ ನಡೆದಿರುವ ಕೆಲ ವಿಚಾರಗಳು. ಕಾನೂನು ವ್ಯಾಪ್ತಿ, ನ್ಯಾಯಾಧೀಶರು ಮತ್ತು ಪೊಲೀಸ್ ನಡುವೆ ನಡೆದಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಏನು ಮಾಡಬೇಕು ತೀರ್ಮಾನ ಮಾಡಿದೆ. ಪ್ರಜಾಪ್ರಭುತ್ವ ಉಳಿಯಬೇಕು ಅದಕ್ಕೆ ಸರಿಯಾಗಿ ಎಲ್ಲರ ನಡೆದುಕೊಳ್ಳಬೇಕು. ವಕೀಲರ ವಿರುದ್ಧ ಸುಳ್ಳು ಕೇಸ್ ದಾಖಲಾಗಿದೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES