ಬೆಂಗಳೂರು : ಕೊಳಚೆ ನೀರಿನಲ್ಲಿ ಸಿಲುಕಿ ಇಡೀ ರಾತ್ರಿ ರೋದಿಸಿದ್ದ ಹಸುವಿನ ರಕ್ಷಣೆ ಮಾಡಿ, ಅಗ್ನಿಶಾಮಕ ಸಿಬ್ಬಂದಿ ಹಸುವಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿರುವ ಘಟನೆ ಬೆಂಗಳೂರಿನ ದೊಡ್ಡನಾಗಮಂಗಲದ ಕೆರೆಯಲ್ಲಿ ನಡೆದಿದೆ.
ನಿನ್ನೆ ಸಂಜೆ ಮೇಯಲು ಬಂದ ಹಸು ದೊಡ್ಡ ನಾಗಮಂಗಲ ಕೆರೆಗೆ ಬಿದ್ದಿದೆ. ಮತ್ತೆ ಹೊರಬರಲಾಗದೆ ಇಡೀ ರಾತ್ರಿ ನೀರಿನಲ್ಲೇ ರೋದಿಸಿತ್ತು. ಹಸುವಿನ ತಲೆ ಬಿಟ್ಟರೆ ಸಂಪೂರ್ಣ ದೇಹ ಕೊಳಚೆ ನೀರಿನಲ್ಲಿ ಮುಳುಗಿಹೋಗಿತ್ತು. ಬೆಳಗಾಗುತ್ತಿದ್ದಂತೆ ಹಸುವಿನ ರೋದನೆ ಕಂಡು ಸ್ಥಳೀಯರು ಹೊರತೆಗೆಯಲು ಯತ್ನಿಸಿದ್ದಾರೆ. ಆದ್ರೆ ಕೊಳಚೆ ನೀರಿನಲ್ಲಿ ಹೆಚ್ಚು ಹೂಳಿದ್ದ ಕಾರಣ ಸ್ಥಳೀಯರಿಂದ ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ: ಸರ್ಕಾರದ ಮತ್ತೊಂದು ಎಡವಟ್ಟು
ಈ ವೇಳೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಸುಮಾರು ಎರೆಡು ಘಂಟೆ ಕಾರ್ಯಾಚರಣೆ ಮಾಡಿ ಹಸುವಿನ ರಕ್ಷಿಸಿದ್ದಾರೆ.
ಸಿಟಿ ಅಗ್ನಿಶಾಮಕ ದಳ ಕಾರ್ಯಾಚರಣೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.