Sunday, December 22, 2024

ಗಂಡು ಮಗುವಿಗೆ ಜನ್ಮ ನೀಡಿದ ಅನುಷ್ಕಾ : ವಿರಾಟ್ ಮನೆಗೆ ಜೂನಿಯರ್ ಕೊಹ್ಲಿ ಆಗಮನ

ಬೆಂಗಳೂರು : ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಮ್ಮೆ ತಂದೆಯಾಗಿದ್ದಾರೆ. ಕೊಹ್ಲಿ ಮನೆಗೆ ಮತ್ತೊಬ್ಬ ಅತಿಥಿಯ ಆಗಮನವಾಗಿದೆ.

ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ರನ್ ಮಷಿನ್ ವಿರಾಟ್ ಉತ್ತರಾಧಿಕಾರಿ ಜೂನಿಯರ್ ಕೊಹ್ಲಿಯ ಆಗಮನವಾಗಿದೆ. ಫೆ.15 ರಂದು ವಿರುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ವಿಷಯವನ್ನು ಖುದ್ದು ವಿರಾಟ್ ಕೊಹ್ಲಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಎರಡನೇ ಮಗುವಿಗೆ ‘ಅಕಾಯ್’ ಎಂದು ನಾಮಕರಣ ಮಾಡಲಾಗಿದೆ. ನಮ್ಮ ಖಾಸಗಿತನವನ್ನು ಗೌರವಿಸಬೇಕಾಗಿ ತಮ್ಮ ಅಭಿಮಾನಿಗಳಲ್ಲಿ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.

ವಾಮಿಕಾಳ ಪುಟ್ಟ ಸಹೋದರ ‘ಅಕಾಯ್​’

ನಾವು ಬಹಳ ಸಂತೋಷದಲ್ಲಿದ್ದೇವೆ. ನಮ್ಮ ಹೃದಯ ಪ್ರೀತಿಯಿಂದಲೇ ತುಂಬಿ ಹೋಗಿದೆ. ನಮ್ಮ ಪುತ್ರ, ವಾಮಿಕಾಳ ಪುಟ್ಟ ಸಹೋದರ ‘ಅಕಾಯ್​’ನನ್ನು ಫೆ.15ರಂದು ಈ ಪ್ರಪಂಚಕ್ಕೆ ಸ್ವಾಗತಿಸಿಕೊಂಡೆವೆಂದು ಹೇಳಲು ಸಂತೋಷವಾಗುತ್ತದೆ. ನಮ್ಮ ಜೀವನದ ಈ ಸಂತೋಷದ ಘಳಿಗೆಯಲ್ಲಿ ನಿಮ್ಮ ಆಶೀರ್ವಾದ ಬಯಸುತ್ತೇವೆ ಎಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

 

View this post on Instagram

 

A post shared by AnushkaSharma1588 (@anushkasharma)

RELATED ARTICLES

Related Articles

TRENDING ARTICLES