Wednesday, January 22, 2025

ಶಾಲೆಗಳಲ್ಲಿ ಮೊಬೈಲ್ ಸಂಪೂರ್ಣ ನಿಷೇಧ : ಎಲ್ಲಿ? ಯಾಕೆ?

ಬೆಂಗಳೂರು : ಶಾಲೆಗಳಲ್ಲಿ ಮೊಬೈಲ್​ ಸಂಪೂರ್ಣ ನಿಷೇಧಿಸಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಫೆಬ್ರವರಿ 19 ರಿಂದ ಅನ್ವಯವಾಗುವಂತೆ ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ ನಿಷೇಧ ಮಾಡಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಯುಗವು ತಂತ್ರಜ್ಞಾನ ನಾಗಾಲೋಟದಲ್ಲಿದೆ. ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್ ಫೋನ್ ಮೂಲಕ ತಂತ್ರಜ್ಞಾನದೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಆದಾಗ್ಯೂ, ಅವರು ಅನಗತ್ಯವಾಗಿ ಅನಗತ್ಯ ಸ್ಥಳಗಳಲ್ಲಿಯೂ ಸಹ ಗಂಟೆಗಟ್ಟಲೆ ಮೊಬೈಲ್ ಫೋನ್‌ಗಳೊಂದಿಗೆ ಇರುತ್ತಾರೆ ಎಂದು ಹೇಳಿದ್ದಾರೆ.

ಮೊಬೈಲ್​ ನಿಷೇಧ ಯಾಕೆ?

ಕಚೇರಿಗಳು, ದೇವಸ್ಥಾನಗಳು, ಕಾಲೇಜುಗಳು ಮತ್ತು ಶಾಲೆಗಳಲ್ಲಿ ಫೋನ್ ಬಳಸುವುದು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೂಡ ಫೋನ್‌ಗೆ ದಾಸರಾಗಿದ್ದಾರೆ. ಅವರು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಮಕ್ಕಳ ವಿದ್ಯಾಭ್ಯಾಸದ ಮೇಲೆ ಮೊಬೈಲ್ ಫೋನ್ ಪ್ರಭಾವ ಬೀರುತ್ತಿದೆ ಎಂದು ರಿಷಿ ಸುನಕ್ ತಿಳಿಸಿದ್ದಾರೆ.

ಒಟ್ನಲ್ಲಿ, ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿರುವ ಬ್ರಿಟನ್​ನಲ್ಲಿ ಪ್ರಧಾನಿ ರಿಷಿ ಸುನಕ್ ಅವರು, ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವಂತಹ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES