Wednesday, January 22, 2025

ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ: ಇಲ್ಲಿದೆ ಚೆಂದದ ಫೋಟೋಸ್​

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಮತ್ತು ಪತಿ ಯಶಸ್‌ ಪಾಟ್ಲಾ ಮೊದಲ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ. ಸರಳವಾಗಿ ಸೀಮಂತ ಶಾಸ್ತ್ರ ನೆರವೇರಿಸಿಕೊಂಡಿರುವ ಜೋಡಿ.ಕಾರ್ಯಕ್ರಮದ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ.

ಮನೆಯಲ್ಲಿಯೇ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿಯೇ ಸೀಮಂತ ನೆರವೇರಿಸಿಕೊಂಡಿದ್ದಾರೆ ಅದಿತಿತಾಯಿಯಾಗುತ್ತಿರುವ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಅದಿತಿ ಸಂಭ್ರಮಿಸಿದ್ದರು.

2022ರ ನವೆಂಬರ್​ನಲ್ಲಿ ಉದ್ಯಮಿ ಯಶಸ್​ ಜೊತೆ ಅದಿತಿ ವಿವಾಹ ನಡೆದಿತ್ತು

ಹಸಿರು ವರ್ಣದ ರೇಷ್ಮೆ ಸೀರೆ, ಕೆಂಪು ವರ್ಣದ ರವಿಕೆ ಧರಿಸಿ, ಸೀಮಂತ ಶಾಸ್ತ್ರದಲ್ಲಿ  ಕಂಗೊಳಿಸಿದ್ದಾರೆ. 

ಸೀಮಂತಕ್ಕೂ ಮುನ್ನ ಪ್ರಗ್ನನ್ಸಿ ಫೋಟೋಶೂಟ್‌ ಸಹ ಮಾಡಿಸಿದ್ದರು ಅದಿತಿ. 

 

ಹಾರೈಕೆಗಳ ಸುರಿಮಳೆಯೂ ಅಭಿಮಾನಿ ವಲಯದಿಂದ ಸುರಿದಿತ್ತು. ಸಿನಿಮಾ ವಿಚಾರಕ್ಕೆ ಬಂದರೆ, ಒಂದಷ್ಟು ಸಿನಿಮಾ ರಿಲೀಸ್‌ ಸಿದ್ಧವಾಗಿದ್ದು, ಮುಂದಿನ ಕೆಲ ತಿಂಗಳ ಕಾಲ ಸಿನಿಮಾದಿಂದ ದೂರವೇ ಉಳಿಯಲಿದ್ದಾರೆ ಅದಿತಿ. 

ನಟ ಶರಣ್‌, ಸಂಗೀತ ನಿರ್ದೇಶಕ ಗುರುಕಿರಣ್‌ ದಂಪತಿ ಆಗಮಿಸಿ ನಟಿ ಅದಿತಿ ಪ್ರಭುದೇವಗೆ ಶುಭ ಹಾರೈಸಿದ್ದಾರೆ. ಇನ್ನೂ ಅಭಿಮಾನಿ ವಲಯದಿಂದ ಹಾರೈಕೆಗಳ ಸುರಿಮಳೆಯೂ ಅಸುರಿದಿತ್ತು. 

RELATED ARTICLES

Related Articles

TRENDING ARTICLES