Thursday, January 23, 2025

ಡಿಕೆಶಿ ಗಡ್ಡ ತೆಗೆಯುವ ಕಾಲ ಹತ್ತಿರ ಬಂದಿದೆ : ಅಶೋಕ್ ಮಾತಿಗೆ ಡಿಕೆಶಿ ನಗು

ಬೆಂಗಳೂರು : ಡಿ.ಕೆ. ಶಿವಕುಮಾರ್ ಗಡ್ಡ ತೆಗೆಯುವ ಕಾಲ ಹತ್ತಿರ ಬಂದಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ನಗೆ ಚಟಾಕಿ ಹಾರಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಆಪ್ತರೊಬ್ಬರು ಈ ಬಗ್ಗೆ ನನಗೆ ಹೇಳಿದ್ದಾರೆ ಎಂದು ಡಿಕೆಶಿ ಸಿಎಂ ಕನಸ್ಸಿನ ಆಸೆ ಬಗ್ಗೆ ಲೇವಡಿ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಗಡ್ಡ ತೆಗೆಯುವ ಕಾಲ ಹತ್ತಿರ ಬಂದಿದೆ ಎಂದು ಅವರ ಆಪ್ತರು ಹೇಳಿದ್ದಾರೆ. ಡಿಸೆಂಬರ್ ಒಳಗೆ ಮುಖ್ಯಮಂತ್ರಿ ಆದರೆ ಆಗ್ತೀಯಾ. ಇಲ್ಲ ಅಂದರೆ ಈ ಜನ್ಮದಲ್ಲಿ ಆಗಲ್ಲ ಎಂದು ಹೇಳಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಈ ವೇಳೆ ಅಶೋಕ್‌ ಏನು ಹೇಳಿದ್ರು ಡಿಕೆಶಿ, ಕೇಳಿಸಿಕೊಂಡು ಸೈಲೆಂಟಾಗಿಯೇ ನಗುತ್ತಾ ಸುಮ್ಮನೆ ಕುಳಿತಿದ್ದರು.

ಡಿಕೆಶಿ ಯಾವಾಗ ಗಡ್ಡ ತೆಗೆಯುತ್ತಾರೆ..?

ಡಿ.ಕೆ. ಶಿವಕುಮಾರ್ ಅವರು ಯಾವಾಗ ಗಡ್ಡ ತೆಗೆಯುತ್ತಾರೆ..? ಅವರ ಆಸೆ ಯಾವಾಗ ಈಡೇರಿಸ್ತೀರಾ ಎಂಬುದನ್ನು ಹೇಳಿ ಎಂದು ಕಾಂಗ್ರೆಸ್​ ನಾಯಕರಿಗೆ ಪ್ರಶ್ನಿಸಿದರು. ಈ ವೇಳೆ ಸಚಿವ ಕೃಷ್ಣ ಭೈರೇಗೌಡ ಅವರು ಮಧ್ಯ ಪ್ರವೇಶಿಸಿದರು. ನನ್ನ ನಾಯಕತ್ವವನ್ನು ಯತ್ನಾಳ್, ಅಶ್ವಥ್ ಒಪ್ಪಿಕೊಂಡಿದ್ದಾರೆ. ನೀವು ನಮ್ಮ ನಡುವೆ ಬೆಂಕಿ ಹಚ್ಚಬೇಡಿ ಎಂದು ಆರ್. ಅಶೋಕ್‌ ಟಾಂಗ್ ಕೊಟ್ಟರು.

RELATED ARTICLES

Related Articles

TRENDING ARTICLES