ಹುಬ್ಬಳ್ಳಿ : ರಾಮಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಬಗ್ಗೆ ಮಾತನಾಡಿದ್ರೆ ನಿಮಗೆ ಕಳೆದ ಬಾರಿ ಬಂದಿರುವ ಸೀಟೂ ಬರಲ್ಲ ಎಂದು ಕುಟುಕಿದ್ದಾರೆ.
ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಕಾಂಗ್ರೆಸ್ಗೆ ಸಾಧ್ಯ ಆಗಲಿಲ್ಲ. ಪ್ರಣಾಳಿಕೆಯಲ್ಲಿ ರಾಮಮಂದಿರ ಕಟ್ಟತೀವಿ ಎನ್ನುವುದು ಇತ್ತು. ಇದೀಗ ರಾಮ ಮಂದಿರ ಆಗಿದೆ ಎಂದು ಹೇಳಿದ್ದಾರೆ.
ಮಂದಿರ ಕಟ್ಟುವಾಗ ಏನು ಮಾಡ್ತಿದ್ರು?
ರಾಮಮಂದಿರ ಕಟ್ಟಡ ನಿರ್ಮಾಣ ಆಗುವ ಜಾಗದಲ್ಲಿ ಆಗಿಲ್ಲ ಎಂಬ ಹೇಳಿಕೆ, ಜಾಗ ಸರಿ ಇಲ್ಲ ಅಂದ್ರೆ ನೀವು ನ್ಯಾಯಾಲಯಕ್ಕೆ ಹೋಗಬೇಕಿತ್ತು. ಮಂದಿರ ನಿರ್ಮಾಣವಾದ ಸಮಯದಲ್ಲಿ ಏನು ಮಾಡುತ್ತಿದ್ದರು? ಸಂತೋಷ್ ಲಾಡ್ಗೆ ಇದೆಲ್ಲ ಅರ್ಥ ಆಗಬೇಕು ಎಂದು ಛೇಡಿಸಿದ್ದಾರೆ.
ಮೋದಿ ದೇಶದ ಭದ್ರತೆಗೆ ಮಹತ್ವ ಕೊಟ್ಟಿದ್ದಾರೆ
ಚೀನಾ ಅಕ್ರಮಣ ಮಾಡಿದ್ರು, ನಮಗೆ ಹೇಳೋರು ಕೇಳೋರು ಯಾರೂ ಇರಲ್ಲ. ಇವತ್ತು ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭದ್ರತೆಗೆ ಮಹತ್ವ ಕೊಟ್ಟಿದ್ದಾರೆ. ಇದನ್ನೆಲ್ಲ ಸಂತೋಷ್ ಲಾಡ್ ಯಾಕೆ ಚರ್ಚೆ ಮಾಡಲ್ಲ. ಸುಮ್ಮನೆ ವಿಷಯ ಡೈವರ್ಟ್ ಮಾಡ್ತಾರೆ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.