ಬೀದರ್ : ಕೇಂದ್ರದ ಬಿಜೆಪಿ ಸರ್ಕಾರದವರು ಮಾನನಷ್ಟ ಮೊಕದ್ದಮೆ ಹಾಕುತ್ತಾರೆ, ನೋಟಿಸ್ ಕೊಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದಾರೆ.
ಬೀದರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವನ್ನು ಎದುರಿಸಲು ನಾವು ತಯಾರಿದ್ದೇವೆ. ಇಂತಹ ಧಮ್ಕಿಯಿಂದ ನಾವು ಹೆದರಲ್ಲ ಎಂದು ಕಿಡಿಕಾರಿದ್ದಾರೆ.
ಎಲ್ಲರಿಗೂ ಹೆದರಿಸಿ, ಎಲ್ಲರಿಗೂ ಇ.ಡಿ ಧಮ್ಕಿ ಕೊಟ್ಟು, ಐಟಿ, ಸಿಬಿಸಿ ಸೇರಿದಂತೆ ಎಲ್ಲ ಏಜೆನ್ಸಿಗಳಿಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಅನೇಕ ಮುಖಂಡರನ್ನು ಬಿಜೆಪಿಗೆ ಸೆಳೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿಗೆ ಬಂದ್ಮೇಲೆ ಅವರು ಸ್ವಚ್ಛ ಆದ್ರಾ..?
ಯಾರು ಇಲ್ಲಿ ಕರಪ್ಟ್ ಇದ್ದರೋ ಅವರು ಅಲ್ಲಿ ಹೋದ ಬಳಿಕ ಒಳ್ಳೆಯರು ಆಗುತ್ತಾರಾ..? ಅವರು ಕರಪ್ಟ್ ಇದಾರಂತ ನೀವು ಕೇಸ್ ಹಾಕ್ತಿರಾ..? ನೀವು ಪಾರ್ಟಿ ಜಾಯನ್ ಮಾಡಿಸಿಕೊಳ್ಳುತ್ತಿರಿ. ನಿಮ್ಮಲ್ಲಿ ಬಂದ ಮೇಲೆ ಅವರು ಸ್ವಚ್ಛ ಆದ್ರಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ಮೋದಿ ಜನರಿಗೆ ಮೋಸ ಮಾಡ್ತಾರೆ
ಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿ ಹೊಸ ಹೊಸ ವಿಷಯ ತೆಗೆದುಕೊಂಡು ಜನರಿಗೆ ಮೋಸ ಮಾಡುವ ಕೆಲಸ ಮಾಡ್ತಾರೆ. ಯುವಕರಿಗೆ ಉದ್ಯೋಗ ಕೊಡ್ತಿನಿ ಅಂದ್ರು, ಕೊಡಲಿಲ್ಲ. ಭ್ರಷ್ಟಾಚಾರದ ಹಣವನ್ನ ದೇಶಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದಿದ್ರು. ಒಬ್ಬರ ಖಾತೆಗಾದ್ರು ಹಣ ಬಂದಿದೆಯಾ? ಎಂದು ಹರಿಹಾಯ್ದಿದ್ದಾರೆ.