Wednesday, January 22, 2025

ಗಿಡದ ಹನುಮಂತರಾಯ ಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನೆ

ತುಮಕೂರು : ಜಿಲ್ಲೆಯ ಬೆಂಡೇಕೆರೆ ಹೊಸೂರು ಗ್ರಾಮದಲ್ಲಿ ವೀರಾಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನೆ, ಪ್ರತಿಷ್ಠಾಪನೆ, ವಿಮಾನ ಗೋಪುರ ಕಳಸ ಸ್ಥಾಪನಾ ಮಹಾಕುಂಭಾಭಿಷೇಕ ಮಹೋತ್ಸವವನ್ನು ನೆರವೇರಿಸಲಾಯಿತು.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬೆಂಡೇಕೆರೆ ಹೊಸೂರು ಗ್ರಾಮದ ಹಳೆಯ ದೇವಾಲಯವನ್ನು ಜೀಣೋದ್ದಾರ ಮಾಡಲಾಗಿದೆ.

ಈ ದೇಗುಲ ಹಿಂದಿನಿಂದಲೂ ಗಿಡದ ಹನುಮಂತರಾಯ ಎಂದೇ ಪ್ರಸಿದ್ದವಾಗಿತ್ತು. ಇದೀಗ ವೀರಾಂಜನೇಯ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಪ್ರಾಣ ಪ್ರತಿಷ್ಠಾಪನೆಯನ್ನ ವೈಭದಿಂದ ನಡೆಸಲಾಯಿತು.

ಶ್ರೀ ಸ್ವಾಮಿಗೆ ಬೆಳಗಿನಿಂದಲೂ ವಿಶೇಷ ಪೂಜೆ

ಇನ್ನೂ ಈ ವೇಳೆ ಸ್ವಾಮಿಗೆ ವಿಮಾನ ಗೋಪುರ ಸಹ ನಿರ್ಮಾಣ ಮಾಡಿದ್ದು, ವಿಮಾನ ಗೋಪುರ ಉದ್ಘಾಟನೆಯೂ ಜರುಗಿತು. ಶ್ರೀ ಸ್ವಾಮಿಗೆ ಬೆಳಗಿನಿಂದಲೂ ವಿಶೇಷ ಪೂಜೆ ಸಲ್ಲಿಸಿ ಮಹಾಕುಂಭಾಬೀಷೇಕವನ್ನು ಸಮರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಮುಖಂಡರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES