Wednesday, January 22, 2025

ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕು ದೆಸೆ ಇಲ್ಲ, ಎಡಬಿಡಂಗಿ ಸರ್ಕಾರ : ಆರ್. ಅಶೋಕ್

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ. ದಿಕ್ಕು ದೆಸೆ ಇಲ್ಲದೆ ಓಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯ ಸಿಎಂ ಸಿದ್ದರಾಮಯ್ಯನವರು ಬೇರೆ.. ಈಗಿರುವ ಸಿಎಂ ಸಿದ್ದರಾಮಯ್ಯನವರೇ ಬೇರೆ ಎಂದು ಕುಟುಕಿದರು.

ಸಿದ್ದರಾಮಯ್ಯನವರಿಗೆ ಆಡಳಿತದಲ್ಲಿ ಹಿಡಿತ ಇಲ್ಲ. ಮೊನ್ನೆ ರಾಜ್ಯ ಬಜೆಟ್ ಮಂಡಿಸಿದಾಗಲೂ ನೋಡಿದ್ದೇವೆ. ಅದು ಅವರ ಬಜೆಟ್ ಅಲ್ಲ, ಡೂಪ್ಲಿಕೇಟ್ ಬಜೆಟ್. ಅಧಿಕಾರಿಗಳು ಬೇಕಾಬಿಟ್ಟಿ ಆದೇಶನ ಚೇಂಜ್ ಮಾಡುತ್ತಿದ್ದಾರೆ. ಮಂತ್ರಿಗಳನ್ನ ಕೇಳಲ್ಲ, ಮುಖ್ಯಮಂತ್ರಿಗಳನ್ನ ಕೇಳಲ್ಲ ಎಂದು ಕಿಡಿಕಾರಿದರು.

ಸರ್ಕಾರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ

ಸರ್ಕಾರಕ್ಕೆ ಅಧಿಕಾರಿಗಳಿಂದ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನುವುದಲ್ಲ ವಿಚಾರ. ಇಲ್ಲಿ ಬರುವಾಗ ಭಕ್ತಿಯಿಂದ, ಪವಿತ್ರತೆಯಿಂದ ಬಾ ಎಂದು ಹೇಳೋದು. ನೀವು ಧೈರ್ಯದಿಂದ ಪ್ರಶ್ನೆ ಮಾಡಬೇಕಾಗಿರುವುದು ಮೇಷ್ಟ್ರ ಬಳಿ. ಸರಿಯಾಗಿ ಊಟ ಕೊಟ್ಟಿಲ್ಲ ಅಂದಾಗ ವಾರ್ಡನ್ ಬಳಿ ಪ್ರಶ್ನೆ ಮಾಡಬೇಕು ಎಂದು ಹೇಳಿದರು.

ಸಚಿವರು ಮೋಜು-ಮಸ್ತಿಯಲ್ಲಿದ್ದಾರೆ

ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟು ಸಚಿವರು ಮೋಜು-ಮಸ್ತಿಯಲ್ಲಿದ್ದಾರೆ. ಹೇಳೋರು ಕೇಳೋರು ಇಲ್ಲದಂತ ಸರ್ಕಾರವಾಗಿದೆ. ಈ ಸರ್ಕಾರ ಎಡಬಿಡಂಗಿ ಸರ್ಕಾರ, ದಿಕ್ಕು ದೆಸೆ ಇಲ್ಲದ ಸರ್ಕಾರ ಎಂದು ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES