Thursday, November 21, 2024

ಸಿಎಂ ಬಳಿ ಸ್ಟೇರಿಂಗ್ ಇದೆ.. ಆದ್ರೆ, ಬ್ರೇಕ್ ಡಿಕೆಶಿ ಬಳಿ, ಕ್ಲಚ್ ರಾಜಣ್ಣ ಬಳಿ ಇದೆ : ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು : ಸಿದ್ದರಾಮಯ್ಯ ಬಳಿ ಸ್ಟೇರಿಂಗ್ ಇದೆ. ಆದ್ರೆ, ಬ್ರೇಕ್ ಡಿ.ಕೆ. ಶಿವಕುಮಾರ್ ಬಳಿ ಇದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಆಡಳಿತವನ್ನ ಬಸ್ಸಿಗೆ ಹೋಲಿಸಿದರು.

ವಿಧಾನ ಪರಿಷತ್​ನಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಗಟ್ಟಿಮುಟ್ಟಾದ ಬಸ್ ಇದೆ. 135 ಜನರ ಸುಭದ್ರ ಸರ್ಕಾರ ಇದೆ. ಆಡಳಿತ ಅನುಭವ ಇರುವ ಸಿಎಂ ಬಳಿ ಸ್ಟೇರಿಂಗ್ ಇದೆ. ಆದ್ರೆ ಬ್ರೇಕ್ ಅವರ ಬಳಿ ಮಾತ್ರ ಇಲ್ಲ. ಬ್ರೇಕ್ ಡಿಸಿಎಂ ಬಳಿ ಇದೆ ಎಂದು ಲೇವಡಿ ಮಾಡಿದರು.

ಬಸ್ ಕೊಡುವಾಗ ಹೇಳಿ ಕೊಟ್ಟಿದ್ದಾರೆ. ನಿನಗೆ ಯಾವಾಗ ಬೇಕೋ ಆಗ ಬ್ರೇಕ್ ಹಾಕು ಅಂತ ಡಿಕೆಶಿಗೆ ಹೇಳಿದ್ದಾರೆ. ಅದು ಹೋಗಲಿ ಬೇಕಾದಾಗ ಕ್ಲಚ್ ಹಾಕೋಣ ಅಂತ ಹೇಳಿದ್ರೆ, ಕ್ಲಚ್ ಸಚಿವ ರಾಜಣ್ಣ ಬಳಿ ಇದೆ. ಅದು ಹೋಗಲಿ ಎಕ್ಸಲೇಟರ್ ಕೊಡೋಣ ಅಂದ್ರೆ ಅದು ಅವರ ಬಳಿ ಇಲ್ಲ. ಎಕ್ಸಲೇಟರ್ ಮುನಿಯಪ್ಪ ಬಳಿ, ಅಲ್ಲ ಮೈಸೂರು ಮಹದೇವಪ್ಪ ಬಳಿ ಇದೆ ಎಂದು ಕುಟುಕಿದರು.

ಮುನಿಯಪ್ಪ, ಮಹದೇವಪ್ಪ ವ್ಯತ್ಯಾಸ ಗೊತ್ತಾಗಲ್ವಾ?

ಈ ವೇಳೆ ಮುನಿಯಪ್ಪ, ಮಹದೇವಪ್ಪಅಂತ ವ್ಯತ್ಯಾಸ ಗೊತ್ತಾಗಲ್ವಾ? ಎಂದು ಸಭಾಪತಿ ಕೇಳಿದರು. ಬೆಳಗ್ಗೆ ಗೊತ್ತಾಗಲಿಲ್ಲ,‌ ಈಗ ಹೊತ್ತಾಯ್ತು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಒಟ್ಟು ಇವರ ಬಳಿ ಬಸ್ ಇದೆ, ಆದ್ರೆ ಬ್ರೇಕ್ಕು, ಕ್ಲಚ್ಚು, ಎಕ್ಸಲೇಟರ್, ಸ್ಟೇರಿಂಗ್ ಎಲ್ಲವೂ ಒಬ್ಬೊಬ್ಬರ ಬಳಿ ಇದೆ ಅಂತ ಕಾಂಗ್ರೆಸ್ ಆಡಳಿತವನ್ನ ಟೀಕೆ ಮಾಡಿದರು.

ನೀವು ಎಲ್ಲವನ್ನೂ ದೆಹಲಿಯಲ್ಲಿ ಕೊಟ್ಟು ಬಂದಿದ್ದೀರಿ

ಈ ವೇಳೆ ಮಧ್ಯ ಪ್ರವೇಶಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ನೀವು ಎಲ್ಲವನ್ನೂ ದೆಹಲಿಯಲ್ಲಿ ಕೊಟ್ಟು ಬಂದಿದ್ದೀರಿ ಎಂದರು. ಗೌರವಾನ್ವಿತ ರಾಜ್ಯಪಾಲರ ಬಳಿ ಸುಳ್ಳು ಹೇಳಿಸಿದ್ದೀರಿ ಅಂತ ಹೇಳಿ ಕೋಟಾ ಶ್ರೀನಿವಾಸ್ ಪೂಜಾರಿ ಭಾಷಣ ಮುಗಿಸಿದರು.

RELATED ARTICLES

Related Articles

TRENDING ARTICLES