Sunday, December 22, 2024

ಮೋದಿ ಒಬ್ಬ ದೊಡ್ಡ ಸುಳ್ಳುಗಾರ, ವಚನ ಭ್ರಷ್ಟ : ಮಾಜಿ ಸಂಸದ ಉಗ್ರಪ್ಪ

ಬಳ್ಳಾರಿ : ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ಸುಳ್ಳುಗಾರ. ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದೇ ಬಿಜೆಪಿಯವರ ಸಾಧನೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಇವರೇ ದಾರಿ ತೋರಿಸುತ್ತಾರೆ. ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ ಏನು ಸಾಧನೆ ಮಾಡಿದೆ? ಎಂದು ಪ್ರಶ್ನೆ ಮಾಡಿದರು.

ಭ್ರಷ್ಟಾಚಾರ ನಿರ್ಮೂಲನೆ ಮಾಡಿದ್ರಾ? 2 ಕೋಟಿ ಉದ್ಯೋಗ ಸೃಷ್ಟಿಸಿದ್ರಾ? ವಿದೇಶಿದಲ್ಲಿರೋ ಕಪ್ಪು ಹಣ ವಾಪಾಸ್ ತಂದ್ರಾ? ಪುಲ್ವಾಮಾ ದಾಳಿಗೆ ಕಾರಣ ಯಾರು ಪತ್ತೆಯಾಯಿತಾ? ದೇಶ ಕಂಡ ಅತ್ಯಂತ ವಚನ ಭ್ರಷ್ಟ ಪ್ರಧಾನಿ ನರೇಂದ್ರ ಮೋದಿ. ಮೊದಲು ನರೇಂದ್ರ ಮೋದಿ ಸುಳ್ಳು ಹೇಳುವುದು ಕಡಿಮೆ ಮಾಡಲಿ ಎಂದು ಛೇಡಿಸಿದರು.

ಮೋದಿ ಶ್ರೀರಾಮನ ಆದರ್ಶಗಳನ್ನು ಪಾಲಿಸಲಿ

ಶ್ರೀರಾಮನ ಆದರ್ಶಗಳನ್ನು ಪ್ರಧಾನಿ ಮೋದಿ ಪಾಲಿಸಲಿ. ನರೇಂದ್ರ ಮೋದಿ ರಾಮನ ಆದರ್ಶ ಪಾಲಿಸುತ್ತಿಲ್ಲ. ಚುನಾವಣೆಗಾಗಿ ರಾಮನಾಮ ಜಪ ಮಾಡುತ್ತಿದ್ದಾರೆ. ಕೆಂದ್ರದ ಬಿಜೆಪಿ ಅವರು ಸಿಬಿಐ, ಇಡಿ, ಐಟಿ ದುರ್ಬಳಕೆ ಮಾಡಿ ರಾಜಕಾರಣ ಮಾಡುತ್ತಾರೆ. ಹೆದರಿಸಿ, ಬೆದರಿಸಿ ದೇಶದಲ್ಲಿ ರಾಜಕೀಯ ಮಾಡುವುದೇ ಬಿಜೆಪಿಗರ ದೊಡ್ಡ ಸಾಧನೆ ಎಂದು ಕುಟುಕಿದರು.

BSY ಮೇಲೆ ಏಕೆ ಸಿಬಿಐ, ಇಡಿ, ಐಟಿ ದಾಳಿ ಆಗಲ್ಲ?

ರಾಜಕೀಯ ಪ್ರೇರಿತ ದಾಳಿಗಳು ನಡೆಯುತ್ತಿವೆ. ಶಾಸಕ ಭರತ್ ರೆಡ್ಡಿ ಮೇಲೆ ಕೂಡ ರಾಜಕೀಯ ಪ್ರೇರಿತ ದಾಳಿ ಆಗಿದೆ. ಆದೇ ಮಾಜಿ ಸಿಎಂ ಬಿ.ಸ್​. ಯಡಿಯೂರಪ್ಪ ಮೇಲೆ ಏಕೆ ಸಿಬಿಐ, ಇಡಿ, ಐಟಿ ದಾಳಿ ಆಗುವುದಿಲ್ಲ? ಬಿಎಸ್​ವೈ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪುಗಳು ಬಂದಿವೆ. ಕೋರ್ಟ್​ನಲ್ಲಿ ಕೇಸ್ ಸಹ ಇವೆ. ಆದ್ರೆ, ಅವರ ಮೇಲೆ ದಾಳಿ ಆಗುತ್ತಿಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಕಿಡಿಕಾರಿದರು.

RELATED ARTICLES

Related Articles

TRENDING ARTICLES