Monday, December 23, 2024

ತಂಗಿಯ ಎಂಗೇಜ್ಮೆಂಟ್​ಗೆ ಬರ್ಲಿಲ್ಲ ಎಂದು ಹೆಂಡ್ತಿಗಿನೇ ಚಾಕು ಇರಿದ ಪತಿರಾಯ

ಬೆಂಗಳೂರು: ತನ್ನ ತಂಗಿಯ ಎಂಗೇಜ್ಮೆಂಟ್​ಗೆ ಬರ್ಲಿಲ್ಲ ಎಂದು ಜಗಳವಾಡುತ್ತಿದ್ದಾಗ ಜಗಳ ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ನಡೆದಿದೆ.

ಜಯಪ್ರಕಾಶ್(32) ತನ್ನ ಪತ್ನಿ‌ ದಿವ್ಯಶ್ರೀ (26)ಗೆ ಚಾಕು ಇರಿದಿದ್ದಾರೆ. ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕೊಲೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರೀತಿಸಿ ಮದುವೆಯಾಗಿದ ಜೋಡಿ

ಪೋಷಕರ ವಿರೋಧದ ನಡುವೆಯೂ ಆರೋಪಿ ಜಯಪ್ರಕಾಶ್ ಹಾಗೂ ದಿವ್ಯಶ್ರೀ ಇಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನ ಮೂಡಲಪಾಳ್ಯದಲ್ಲಿ ವಾಸವಾಗಿದ್ದರು. ಗಂಡ ಜಯಪ್ರಕಾಶನಿಗೆ ಅನಾರೋಗ್ಯದ ಸಮಸ್ಯೆಯಿದ್ದ ಕಾರಣ ಮನೆಯ ಸಂಪೂರ್ಣ ಖರ್ಚು ವೆಚ್ಚಗಳನ್ನ ದಿವ್ಯಶ್ರಿಯೇ ನೋಡಿಕೊಳ್ಳುತ್ತಿದ್ದರು. ನಂತರ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು.

ಎಂಗೇಜ್ಮೆಂಟ್​ಗೆ ಬರಲಿಲ್ಲ ಎಂದು ಚಾಕು ಇರಿತ

ಫೆಬ್ರವರಿ 15ರಂದು ತನ್ನ ತಂಗಿಯ ಎಂಗೇಜ್ಮೆಂಟ್​ಗೆ ಬರಲಿಲ್ಲ ಎಂದು ಜಗಳ ಆರಂಭಿಸಿದ್ದ ಜಯಪ್ರಕಾಶ್, ದಿವ್ಯಶ್ರಿ ಮೇಲೆ ಚಾಕುವಿನಿಂದ‌ ಹಲ್ಲೆ ನಡೆಸಿದ್ದ. ಈ ವೇಳೆ ದಿವ್ಯಶ್ರಿ ಕಾಲಿಗೆ ಚಾಕು ಇರಿದ ಗಾಯಗಳಾಗಿದ್ದವು. ಬಳಿಕ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ದಿವ್ಯಶ್ರಿ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಜಯಪ್ರಕಾಶನನ್ನ ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES