Wednesday, December 25, 2024

ರಾಮ, ರಹೀಮ್ ಹೆಸರಲ್ಲಿ ಬಿಜೆಪಿಯವರು ಜನರನ್ನು ಹುಚ್ಚು ಮಾಡ್ತಾರೆ : ಸಂತೋಷ್ ಲಾಡ್

ಹುಬ್ಬಳ್ಳಿ : ರಾಮ, ರಹೀಮ್, ಪಾಕಿಸ್ತಾನ, ಅಪಘಾನಿಸ್ತಾನ ಹೆಸರಿನ ಮೂಲಕ ಜನರನ್ನು ಹುಚ್ಚು ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತನಾಡಿದ್ರು. ಹಾಗಿದ್ರೆ, RDX ಹೇಗೆ ಬಂತು? ಎಂದು ಪ್ರಶ್ನೆ ಮಾಡಿದ್ದಾರೆ.

ದೇಶದಲ್ಲಿ ಈ ತರಹ ಚರ್ಚೆಗಳೇ ಆಗತಿಲ್ಲ. ಕೇವಲ ರಾಮ ಮಂದಿರ, ನಿತೀಶ್ ಕುಮಾರ್, ಕಲನಾಥ್. ಸೋತ ಕಮಲನಾಥ್ ತಗೊಂಡ್ರಿ. ಇವರಿಂದ ಯಾವ ಹಿಂದೂಗೆ ಲಾಭ ಆಗಿಲ್ಲ. ಇದಕ್ಕೆಲ್ಲ ಅಂತ್ಯ ಇದೆ, ದೇವರು ಇದಾನೆ. ಬಿಜೆಪಿ ಏನೂ ಮಾಡಿಲ್ಲ ಎಂದು ಟೀಕಿಸಿದರು.

ಮೋಸ ಮಾಡಿ ವೋಟ್ ತಗೋತಾರೆ

ಗ್ಯಾರಂಟಿಗಳನ್ನು ನೋಡಿ ಮತ ಹಾಕಿದ್ರೆ ಬಿಜೆಪಿಯವರು ಗೆಲ್ಲಲ್ಲ. ಗ್ಯಾರಂಟಿ ತಪ್ಪಿಸೋಕೆ ರಾಮ, ರಹೀಮ್ ಬರ್ತಾರೆ. ಅಭಿವೃದ್ದಿ ವಿಚಾರದ ಮೇಲೆ ಹೋದರೆ ಬಿಜೆಪಿ ಗೆಲ್ಲಲ್ಲ. ಮುಂಬರುವ 100 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಜನರಿಗೆ ಮೋಸ ಮಾಡಿ ವೋಟ್ ತಗೋತಾರೆ. ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಎಂದು ವೋಟ್ ಕೇಳಿ ಎಂದು ಕುಟುಕಿದರು.

ಸ್ಪರ್ಧೆ ಮಾಡೋಕೆ ನನಗೆ ಆಸಕ್ತಿ ಇಲ್ಲ

ನೀವು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಲೋಕಸಭಾ ಚುನಾವಣೆಗೆ‌ ನಿಲ್ಲೋಕೆ ಮನಸಿಲ್ಲ. ಲೋಕಸಭೆ ಚುನಾವಣೆ ಸ್ಪರ್ಧೆ ಮಾಡೋಕೆ ನನಗೆ ಆಸಕ್ತಿ ಇಲ್ಲ ಎಂದು ಸಂತೋಷ್ ಲಾಡ್ ಸ್ಪಷ್ಟನೆ ನೀಡಿದರು.

RELATED ARTICLES

Related Articles

TRENDING ARTICLES