Wednesday, January 22, 2025

ದೇಶಕ್ಕೆ ಮೋದಿ ಏನು ಮಾಡಿದ್ದಾರೆ? ದೇಶ ಸಾಲದಲ್ಲಿ ಮುಳುಗಿದೆ : ಸಂತೋಷ್ ಲಾಡ್

ಹುಬ್ಬಳ್ಳಿ : ಈ ದೇಶ ಎಲ್ಲರಿಗೂ ಸೇರಿದ್ದು. ಬಿಜೆಪಿಯವರು ದೇಶಕ್ಕೆ ಏನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಕುಟುಕಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶಕ್ಕೆ ಬಿಜೆಪಿಯವರು ಏನು ಮಾಡಿದ್ದಾರೆ? ದೇಶ ಸಾಲದಲ್ಲಿ ಮುಳುಗಿ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಸಾಹೇಬರು ಮುಖ್ಯಮಂತ್ರಿ ಇದ್ದಾಗ ಮಾತನಾಡಿರುವ ವಿಡಿಯೋ ಇದೆ. ಅದನ್ನು ಬಿಜೆಪಿಯವರು ಕೇಳಬೇಕು. ನಾವು ತೆರಿಗೆ ಕೇಳಿದ್ರೆ ಸುಳ್ಳು ರಾಮಯ್ಯ ಅಂತಿದ್ದಾರೆ. ಹೌದು, ಸುಳ್ಳು ರಾಮಯ್ಯ ಅಂದ್ರೆ 10 ವರ್ಷದಲ್ಲಿ ಇವರು ಏನು ಮಾಡಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಕಾಂಟ್ರವರ್ಸಿ ಬೇಡ, ಅಭಿವೃದ್ಧಿ ಬಗ್ಗೆ ಮಾತನಾಡಲಿ

ಮೇಕ್ ಇನ್ ಇಂಡಿಯಾ, ರೈತರ ಆದಾಯ ದುಪ್ಪಟ್ಟು, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಮಾತನಾಡಿದ್ರು. ಇದೀಗ ನಾವು ಯಾವುದರ ಬಗ್ಗೆ ಚರ್ಚೆ ಮಾಡಬೇಕು. ಬರುವ 90 ದಿನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ. ನಿರ್ಮಲಾ ಸೀತಾರಾಮನ್ ಮೂರು ಕೋಟಿ ಮನೆ ನಿರ್ಮಾಣ ಅಂದ್ರೆ, ಮೋದಿ ಅವರು ನಾಲ್ಕು ಕೋಟಿ ಮನೆ ನಿರ್ಮಾಣ ಅಂತಾರೆ. ನರೇಗಾದಲ್ಲಿ ಇವರ ಸಾಧನೆ ಏನು? ಕಾಂಟ್ರವರ್ಸಿ ಬಗ್ಗೆ ಮಾತನಾಡದೆ, ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಸಂತೋಷ್ ಲಾಡ್ ಕಿಡಿಕಾರಿದರು.

RELATED ARTICLES

Related Articles

TRENDING ARTICLES