Wednesday, January 22, 2025

ಜಡ್ಡು ದಾಳಿಗೆ ಆಂಗ್ಲರು ಧೂಳಿಪಟ.. ಭಾರತಕ್ಕೆ 434 ರನ್​ಗಳ ಬೃಹತ್ ಗೆಲುವು

ಬೆಂಗಳೂರು : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ 434 ರನ್​ಗಳ ಬೃಹತ್ ಗೆಲುವು ದಾಖಲಿಸಿದೆ.

ರಾಜ್​ಕೋಟ್​ನಲ್ಲಿ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಆಂಗ್ಲರು ಕೇವಲ 122 ರನ್​ಗಳಿಗೆ ಆಲೌಟ್​ ಆದರು. ಈ ಮೂಲಕ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿತು.

557 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ಅಕ್ಷರಶಃ ನಲುಗಿತು. ಆಂಗ್ಲರ ಪರ ಮಾರ್ಕ್​ ವುಡ್ 32 ರನ್​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಕ್ರಾಲಿ 11, ಡಕೆಟ್ 4, ಪೋಪ್ 3, ರೂಟ್ 7, ಬೈರ್ಸ್ಟೋವ್ 4, ನಾಯಕ ಸ್ಟೋಕ್ಸ್​ 15, ಪೋಕ್ಸ್​ 16, ಹಾರ್ಟ್ಲಿ 16 ರನ್​ ಗಳಿಸಿದರು.

ಭಾರತದ ಪರ ತೂಫಾನ್ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ಕುಲ್​ದೀಪ್ ಯಾದವ್ 2, ಬುಮ್ರಾ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು.

ಭಾರತಕ್ಕೆ ಅತಿದೊಡ್ಡ ಟೆಸ್ಟ್ ಗೆಲುವು

434 ರನ್​ : ಇಂಗ್ಲೆಂಡ್ (ರಾಜ್‌ಕೋಟ್), 2024

372 ರನ್​ : NZ (ಮುಂಬೈ), 2021

337 ರನ್​ : SA (ದೆಹಲಿ), 2015

321 ರನ್ : NZ (ಇಂದೋರ್), 2016

320 ರನ್ : ಆಸ್ಟ್ರೇಲಿಯಾ (ಮೊಹಾಲಿ), 2008

RELATED ARTICLES

Related Articles

TRENDING ARTICLES