Sunday, February 23, 2025

ಗರ್ಭಿಣಿ ಮೇಲೆ ಗ್ಯಾಂಗ್‌ ರೇಪ್‌; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುರ್ಷಕರ್ಮಿಗಳು

ಭೋಪಾಲ್‌: ತನ್ನ ಪತಿಯ ಪರ ಸಂಧಾನ ಮಾಡಲು ತೆರಳಿದ್ದ ಗರ್ಭಿಣಿಯ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿದ ಭೀಕರ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ನಡೆದಿದೆ.
ಹೌದ,ತನ್ನ ಪತಿ ಮಾಡಿದ ಅತ್ಯಾಚಾರಕ್ಕೆ ಮಾತನಾಡಿ ಸಂಧಾನ ನಡೆಸಲು ಆರೋಪಿಗಳ ಮನೆಗೆ ತೆರಳಿದ್ದರು. ಈ ವೇಳೆ 38 ವರ್ಷದ ಸಂತ್ರಸ್ಥೆಯ ಮೇಲೆ ಅಲ್ಲಿನ ಮೂವರು ಆರೋಪಿಗಳು ಅತ್ಯಾಚಾರ ಮಾಡಿದ್ದಾರೆ.ಮಹಿಳೆಗೆ ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸಂತ್ರಸ್ತೆಯ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಮ್ಯಾಜಿಸ್ಟ್ರೇಟ್‌ ಬಳಿ ಸಂಸ್ತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಪೊಲೀಸರು ಈವರೆಗೆ ಹೇಳಿಕೆ ದಾಖಲಿಸಿಲ್ಲ, ಆದ್ರೆ ತನಿಖೆ ಮುಂದುವರಿಸುತ್ತಿದ್ಧಾರೆ ಎಂದು ತಿಳಿದು ಬಂದಿದೆ.

 ಘಟನೆಗೆ ಕಾರಣ

ಸಂತ್ರಸ್ತೆಯ ಪತಿ ಸುರೇಶ್‌ ಸಂಖ್ವಾರ್‌ ಮೊರೆನಾ ಜಿಲ್ಲೆಯ ಅಂಬಾಹ್‌ ಪಟ್ಟಣದ ಚಾಂದ್‌ಪುರದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಆಕೆ ಮದುವೆ ವಿಷಯ ಪ್ರಸ್ತಾಪಿಸಿದಾಗ ಸುರೇಶ್‌ ಅದನ್ನು ನಿರಾಕರಿಸಿದ್ದ. ಹಾಗಾಗಿ ಮಹಿಳೆ ಪತಿ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದಳು. ಈ ಪ್ರಕರಣವನ್ನು ಸಂತ್ರಸ್ತೆ ಸಂಧಾನ ಮಾಡಲು ಹೋದಾಗಲೇ ದುರುಳರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

RELATED ARTICLES

Related Articles

TRENDING ARTICLES