ಹಾಸನ : ಮೈತ್ರಿ ಇರುತ್ತೋ, ಮೈತ್ರಿ ಇರಲ್ವೋ.. ಎಲ್ಲಾ ಸಂದರ್ಭದಲ್ಲೂ ಹಾಸನ ಜಿಲ್ಲೆಯ ಜನ ಜನತಾದಳವನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಜನ ಎಂದೂ ನಮ್ಮನ್ನು ಕೈಬಿಟ್ಟಿಲ್ಲ. ಇಲ್ಲಿ ಜನತಾದಳದ ಅಭಿಮಾನಿಗಳಿದ್ದಾರೆ, ಅವರ ಶ್ರಮ ಇದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. ಈ ಚುನಾವಣೆಯಲ್ಲಿ ಜನತದಾಳದ ಅಭ್ಯರ್ಥಿಯನ್ನು ಗೆಲ್ಲಿಸುವ ತೀರ್ಮಾ ಮಾಡ್ತಾರೆ ಎಂಬ ವಿಶ್ವಾಸ ನನಗಿದೆ. ಲೆಕ್ಕಕ್ಕೆ ಯಾರೂ ಇಲ್ಲಾ ಅಂತ ಹೇಳಲ್ಲ, ಯಾರ ಬಗ್ಗೆನೂ ದುರಂಹಕಾರದಿಂದ ಮಾತನಾಡಲ್ಲ. ಎಲ್ಲರೂ ಬೇಕು ನಮಗೆ. ಇವತ್ತಿನ ಏನು ಪರಿಸ್ಥಿತಿ ನಡೆಯುತ್ತಿದೆ ಎನ್ನುವುದನ್ನು ನೋಡಿ ಅವರು ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
ಅವರು ನಮಗಿಂತ ದೊಡ್ಡವರು
ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮೈತ್ರಿ ಬಗ್ಗೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಅವರ ಬಗ್ಗೆ ಏಕೆ ಚರ್ಚೆ ಮಾಡೋಣ. ಅವರು ನಮಗಿಂತ ದೊಡ್ಡವರಿದ್ದಾರೆ, ಬುದ್ದಿವಂತರಿದ್ದಾರೆ. ಅವರು ಹೇಳ್ತಾರೆ ಅದನ್ನು ಸರಿಪಡಿಸೋದು ಹೇಗೆ ಅಂತ ನೋಡೋಣ. ಅವರಿಗೆ ಏಕೆ ಉತ್ತರ ಕೊಡಬೇಕು, ಅವಶ್ಯಕತೆ ಏನಿದ? ಎಂದು ನಯವಾಗಿಯೇ ತಿರುಗೇಟು ಕೊಟ್ಟರು.
ಮೈತ್ರಿ ನಾನು ಮಾಡಿಕೊಂಡಿಲ್ಲ
ಮೈತ್ರಿ ನಾನು ಮಾಡಿಕೊಳ್ಳಬೇಕು ಎಂದು ಹೋಗಿಲ್ಲ. ಕಳೆದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯರೆಲ್ಲಾ ಸೇರಿ ತೀರ್ಮಾನ ಮಾಡಿಕೊಂಡಿರುವುದು. ನಮ್ಮ ವೈಯುಕ್ತಿಕ ಲಾಭಕ್ಕೆ ಮೈತ್ರಿ ಮಾಡಿಕೊಂಡಿಲ್ಲ. ಅವರಿಗೆಲ್ಲಾ ನಾನು ಏಕೆ ಉತ್ತರ ಕೊಡಲಿ, ಕೊಡಲ್ಲ ಎಂದು ಕುಮಾರಸ್ವಾಮಿ ಕಡ್ಡಿ ಮುರಿದಂತೆ ಹೇಳಿದರು.